ಚಿಕ್ಕಮಗಳೂರು: ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ವೈ. ಗಂಗಾಧರ ಅವರು ಎರಡು ಮನೆ, 16 ನಿವೇಶನಗಳಿಗೆ ಮಾಲೀಕ. ಒಂದು ಪೆಟ್ರೋಲ್ ಬಂಕ್, ರೆಸಾರ್ಟ್‌ನಲ್ಲಿ ಪಾಲುದಾರಿಕೆಯನ್ನೂ ಅವರ ಪತ್ನಿ ಹೆಸರಿನಲ್ಲಿ ಹೊಂದಿದ್ದಾರೆ.
ಆದಾಯ ಮೀರಿ ₹3.50 ಕೋಟಿ ಆಸ್ತಿ ಗಳಿಸಿರುವ ದಾಖಲೆಗಳು ಪತ್ತೆಯಾಗಿವೆ. ನಗರದ ಹಲವೆಡೆ ನಿವೇಶನ ಮತ್ತು ಮನೆಗಳನ್ನು ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ರಾಮನಹಳ್ಳಿಯಲ್ಲಿ ಪೆಟ್ರೋಲ್ ಬಂಕ್ ಮತ್ತು ಅಲ್ಲಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹುಲಿಯಾರಹಳ್ಳಿ ಸಮೀಪದ ನಿರ್ಮಾಣ ಹಂತದ ರೆಸಾರ್ಟ್‌ನಲ್ಲಿ ಶೇ 35ರಷ್ಟು ಪಾಲುದಾರಿಕೆ ಹೊಂದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಯನಗರದಲ್ಲಿನ ಮನೆ, ರಾಮನಹಳ್ಳಿಯಲ್ಲಿ ಇರುವ ಪೆಟ್ರೋಲ್ ಬಂಕ್, ನಿರ್ಮಾಣ ಹಂತದ ರೆಸಾರ್ಟ್ ಮತ್ತು ನಿರ್ಮಿತಿ ಕೇಂದ್ರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.