ADVERTISEMENT

ಸಮಾಜದಲ್ಲಿ ಜಾತಿಗಿಂತಲೂ ನೀತಿ ಮುಖ್ಯ

ಮೂಡಿಗೆರೆ: ಮಡಿವಾಳ ಮಾಚಿದೇವ ಜಯಂತಿಯಲ್ಲಿ ತಹಶೀಲ್ದಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 16:53 IST
Last Updated 4 ಫೆಬ್ರುವರಿ 2021, 16:53 IST
ಮೂಡಿಗೆರೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಸಾಹಿತಿ ಎಂ.ಎಸ್.ನಾಗರಾಜ್ ಮಾತನಾಡಿದರು
ಮೂಡಿಗೆರೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಸಾಹಿತಿ ಎಂ.ಎಸ್.ನಾಗರಾಜ್ ಮಾತನಾಡಿದರು   

ಮೂಡಿಗೆರೆ: ‘ಸಮಾಜದಲ್ಲಿ ಜಾತಿಗಿಂತಲೂ ನೀತಿಗೆ ಆದ್ಯತೆ ನೀಡಿ ಬದುಕು ರೂಪಿಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ಎಚ್.ಎಂ. ರಮೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿ ಯಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

‘ಸಮಾಜದ ದಾರ್ಶನಿಕರಾದ ಬಸವಣ್ಣ, ಬುದ್ಧ, ಅಂಬೇಡ್ಕರ್ ಆದಿಯಾಗಿ ಪ್ರತಿಯೊಬ್ಬರೂ ಸಮಾಜದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು ಎಂದು ಕನಸು ಕಂಡಿದ್ದರು. ಆದರೆ, ಇಂದಿಗೂ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿರುವುದು ದುರ್ದೈವವಾಗಿದೆ. ಮಾಚಿದೇವನ ವಿಚಾರಧಾರೆಗಳು, ಮಹಾತ್ಮರ ಚಿಂತನೆಗಳು ಒಂದು ಜಾತಿಗೆ ಮಾತ್ರ ಸೀಮಿತವಾಗಬಾರದು. ಮಹಾತ್ಮರ ಸಂದೇಶಗಳನ್ನು ಎಲ್ಲಾ ವರ್ಗಗಳು, ಎಲ್ಲಾ ಧರ್ಮಗಳು ಸ್ವೀಕರಿಸಬೇಕು’ ಎಂದರು.

ADVERTISEMENT

ಸಾಹಿತಿ ಎಂ.ಎಸ್. ನಾಗರಾಜ್ ಮಾತನಾಡಿ, ‘ಸಮಾಜದ ಅನಿಷ್ಟ ಪದ್ಧತಿಗಳನ್ನು, ಜಾತಿ, ಧರ್ಮಗಳಲ್ಲಿ ಅಡಗಿದ್ದ ಮೌಢ್ಯತೆಗಳನ್ನು ತೊಡೆದು ಹಾಕುವಲ್ಲಿ ಮಾಚಿದೇವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಮಾಚಿದೇವರು ಸಮಾಜದಲ್ಲಿ ‘ಅರಸುತನವು ಮೇಲಲ್ಲ, ಅಗಸತನವು ಕೀಳಲ್ಲ’ ಎಂಬ ಸಂದೇಶವನ್ನು ಸಾರುವ ಮೂಲಕ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ಪುಷ್ಠಿ ನೀಡಿದ್ದರು. ಅವರ ಜೀವನ ಸಂದೇಶವೇ ನಮ್ಮೆಲ್ಲರಿಗೂ ಆದರ್ಶವಾಗಬೇಕು’ ಎಂದರು.

ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಕ್ಕಿ ಮಂಜುನಾಥ್, ಮಡಿವಾಳ ಮಾಚಿದೇವ ಸಂಘಟನೆಯ ಯುವ ಘಟಕದ ಅಧ್ಯಕ್ಷ ಎಂ.ವಿ.ಅನಿಲ್ ಛತ್ರಮೈದಾನ, ಖಜಾಂಚಿ ಲೋಕೇಶ್, ಗೌರವಾಧ್ಯಕ್ಷ ಯತಿರಾಜ್, ಗುರುರಾಜ್ ಹಾಲ್ಮಠ್, ಸತ್ಯನಾರಾಯಣ, ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.