ADVERTISEMENT

ನರಸಿಂಹರಾಜಪುರ: ಸಂತೆ ಮಾರುಕಟ್ಟೆಗೆ ಹೊಸ ನಾಮಫಲಕ; ಪುನಿತ್‌ ರಾಜ್‌ಕುಮಾರ್ ಹೆಸರು

​ಪ್ರಜಾವಾಣಿ ವಾರ್ತೆ
Published 21 ಮೇ 2025, 12:42 IST
Last Updated 21 ಮೇ 2025, 12:42 IST
ನರಸಿಂಹರಾಜಪುರದ ಸಂತೆ ಮಾರುಕಟ್ಟೆಗೆ ಡಾ.ಪುನಿತ್ ರಾಜಕುಮಾರ್ ಸಂತೆ ಮಾರುಕಟ್ಟೆ ಎಂದು ಭಾನುವಾರ ಹೊಸ ನಾಮಫಲ ಅಳವಡಿಸಲಾಗಿದೆ
ನರಸಿಂಹರಾಜಪುರದ ಸಂತೆ ಮಾರುಕಟ್ಟೆಗೆ ಡಾ.ಪುನಿತ್ ರಾಜಕುಮಾರ್ ಸಂತೆ ಮಾರುಕಟ್ಟೆ ಎಂದು ಭಾನುವಾರ ಹೊಸ ನಾಮಫಲ ಅಳವಡಿಸಲಾಗಿದೆ   

ನರಸಿಂಹರಾಜಪುರ: ಪಟ್ಟಣದ ಸಂತೆ ಮಾರುಕಟ್ಟೆಗೆ ಪಟ್ಟಣ ಪಂಚಾಯಿತಿಯಿಂದ ಪುನಿತ್‌ ರಾಜ್‌ಕುಮಾರ್ ಹೆಸರನ್ನಿಟ್ಟು, ಡಾ.ಪುನಿತ್ ರಾಜಕುಮಾರ್ ಸಂತೆ ಮಾರುಕಟ್ಟೆ ಎಂದು ನಾಮಫಲಕ ಅಳವಡಿಸಲಾಗಿತ್ತು.

ಸದರಿ ನಾಮಫಲಕ ಶಿಥಿಲವಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯ ಕುಂದುಕೊರತೆ ವಿಭಾಗದಲ್ಲಿ ನಾಮಫಲಕ ದುರಸ್ತಿಪಡಿಸಿ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಈ ನಿಟ್ಟಿನಲ್ಲಿ ಪ.‌ಪಂ. ಶಿಥಿಲಗೊಂಡ ನಾಮಫಲಕ ತೆರವುಗೊಳಿಸಿ, ಭಾನುವಾರ ಹೊಸ ನಾಮಫಲಕ ಅಳವಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT