ಕಡೂರು: ಭಾರತ ದೇಶವು ಉನ್ನತಿ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಕಾರಣವಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೇಳಿದರು.
ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಕಡೂರು ಬಿಜೆಪಿ ಮಂಡಲ ಸೋಮವಾರ ಹಮ್ಮಿಕೊಂಡಿದ್ದ ಸೇವಾ ಪಾಕ್ಷಿಕದ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಡೂರು ಮಂಡಲವು ಮೋದಿ ಅವರ ಜನ್ಮದಿನದ ಸಲುವಾಗಿ ಹಮ್ಮಿಕೊಂಡಿರುವ ಸೇವಾಪಾಕ್ಷಿಕವು ವಿಭಿನ್ನವಾಗಿದೆ. ಮೊದಲ ಕಾರ್ಯಕ್ರಮವಾಗಿ ಶ್ರಮದಾನದ ಮೂಲಕ ಸ್ವಚ್ಛತೆ ಈಗಾಗಲೇ ನೆರವೇರಿದೆ. ರಕ್ತದಾನ ಶಿಬಿರವು ಸೇವಾ ಮನೋಭಾವದ ದ್ಯೋತಕವಾಗಿದೆ. ಸಸಿ ನೆಡುವ ಮೂಲಕ ಪರಿಸರ ರಕ್ಷಣೆಯ ಕಾರ್ಯಕ್ರಮ ನಡೆಯಲಿದೆ. ಜನಮನದಲ್ಲಿ ನೆಲೆ ಕಂಡುಕೊಂಡ ನಾಯಕನ ಜನ್ಮದಿನವು ದೇಶಕಟ್ಟುವ ಕಾರ್ಯಕ್ರಮವಾಗಿ ಮೂಡಿಬಂದಿದ್ದು ಜನರಿಗೆ ಮೋದಿಯವರ ಮೇಲಿನ ಪ್ರೇಮದ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಮಾತನಾಡಿದರು. ಈ ಸಂದರ್ಭದಲ್ಲಿ 100 ಯುವಕರು ರಕ್ತದಾನ ಮಾಡಿದರು.ಶಿವಮೊಗ್ಗದ ರೋಟರಿ ರಕ್ತನಿಧಿಯ ಡಾ.ಓಂಕಾರ್ ನೇತೃತ್ವದಲ್ಲಿ ಯುನಿಟ್‌ಗಳನ್ನು ಸಂಗ್ರಹಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ದೇವಾನಂದ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಾವೇರಿ ಲಕ್ಕಪ್ಪ, ವಕ್ತಾರ ಶಾಮಿಯಾನಾ ಚಂದ್ರು, ಸಿ.ಮಲ್ಲಿಕಾರ್ಜುನ, ಅಜಯ್ ಒಡೆಯರ್, ಭರತ್ ಕೆಂಪರಾಜು, ರಾಜಾನಾಯ್ಕ, ಬೀರೂರು ಪುರಸಭೆ ಸದಸ್ಯೆ ಸಹನಾ, ಎಸ್‌ಸಿ ಮೋರ್ಚಾದ ಹುಲ್ಲೇಹಳ್ಳಿ ಲಕ್ಷ್ಮಣ್, ಎಚ್.ಉಮೇಶ್, ವಿವಿಧ ಮೋರ್ಚಾ ಮತ್ತು ಮಂಡಲಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.