ADVERTISEMENT

ಮೂಡಿಗೆರೆ: ದೀಪಾವಳಿ ಸಂಭ್ರಮಕ್ಕೆ ಹುಲಿ ಕುಣಿತದ ರಂಗು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 4:55 IST
Last Updated 17 ಅಕ್ಟೋಬರ್ 2025, 4:55 IST
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಬಳಿ ಕಂಡು ಬಂದ ಹುಲಿ ವೇಷಧಾರಿಗಳು
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಬಳಿ ಕಂಡು ಬಂದ ಹುಲಿ ವೇಷಧಾರಿಗಳು   

ಮೂಡಿಗೆರೆ: ತಾಲ್ಲೂಕಿನಾದ್ಯಂತ ದೀಪಾವಳಿ ಹಬ್ಬದ ತಯಾರಿ ನಡೆದಿರುವ ಬೆನ್ನಲ್ಲೇ ಹುಲಿ ಕುಣಿತದ ಸಂಭ್ರಮ ಹೆಚ್ಚಾಗಿದೆ.

ದೀಪಾವಳಿ ಸಮಯದಲ್ಲಿ ಹುಲಿವೇಷ ಧರಿಸಿ ಬರುವ ವೇಷಧಾರಿಗಳು, ಹಳ್ಳಿಹಳ್ಳಿಗೆ ತೆರಳಿ ಹುಲಿ‌ಕುಣಿತ ಮೂಲಕ ನೋಡುಗರನ್ನು ರಂಜಿಸುತ್ತಿದ್ದಾರೆ.

ತಾಲ್ಲೂಕಿಗೆ ಹೆಚ್ಚಾಗಿ ಕರಾವಳಿ ಭಾಗದಿಂದ ಹುಲಿ ಕುಣಿತದ ತಂಡಗಳು ಬರುವುದು ವಾಡಿಕೆಯಾಗಿದ್ದು, ಈ ಬಾರಿ ಹತ್ತಕ್ಕೂ ಹೆಚ್ಚು ತಂಡಗಳು ತಾಲ್ಲೂಕಿಗೆ ಬಂದಿವೆ. ಪಟ್ಟಣ ಸೇರಿದಂತೆ ಕೊಟ್ಟಿಗೆಹಾರ, ಬಣಕಲ್, ಗೋಣಿಬೀಡು, ಚಿನ್ನಿಗಾ ಮುಂತಾದ ಗ್ರಾಮಗಳಲ್ಲಿ ಇಡೀದಿನ ಹುಲಿಕುಣಿತ ನಡೆಯುತ್ತಿದ್ದು, ಅಂಗಡಿ, ಹೋಟೆಲ್ ಹಾಗೂ ಮನೆಗಳಿಗೆ ತೆರಳುವ ಹುಲಿಕುಣಿತದ ತಂಡವು ವರ್ತಕರು, ಮನೆಯ ಮಾಲೀಕರು ನೀಡುವ ಹಣಹನ್ನು ಪಡೆದು ತೆರಳುತ್ತಾರೆ. ಹುಲಿ ಕುಣಿತದ ವಾದ್ಯ ಸದ್ದಾದರೆ ಸಾಕು ಇಡೀ ಓಣಿಯ ಮಕ್ಕಳು ಹುಲಿಯ ಹಿಂದೆ ಸಾಗುವ ದೃಶ್ಯ ಸಾಮಾನ್ಯವಾಗಿದೆ.

ADVERTISEMENT

‘ಹನ್ನೆರೆಡು ವರ್ಷಗಳಿಂದ ಹುಲಿವೇಷ ಹಾಕುತ್ತಿದ್ದೇನೆ.‌ ದೀಪಾವಳಿ ಸಮಯದಿಂದ ಲಕ್ಷ ದೀಪದವರೆಗೂ ಹುಲಿವೇಷ ಹಾಕಿ ಊರೂರು ಸುತ್ತಲಾಗುತ್ತದೆ.‌ ಧರ್ಮಸ್ಥಳ ಲಕ್ಷದೀಪದ ಬಳಿಕ ಕುಣಿತಕ್ಕೆ ವಿರಾಮ ಹೇಳಿ, ತೋಟ, ಗದ್ದೆ ಕೆಲಸ ಮಾಡುತ್ತೇವೆ’ ಎಂದು ಹುಲಿ ವೇಷಧಾರಿ ಸಂಜೀವ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.