ADVERTISEMENT

ಎಂಆರ್‌ಎಫ್‌ ಮಾಗ್ರಿಪ್‌ ದ್ವಿಚಕ್ರವಾಹನ ರ್‍ಯಾಲಿ: ತನ್ವೀರ್‌ ಪ್ರಥಮ

​ಪ್ರಜಾವಾಣಿ ವಾರ್ತೆ
Published 15 ಮೇ 2022, 14:46 IST
Last Updated 15 ಮೇ 2022, 14:46 IST

ಚಿಕ್ಕಮಗಳೂರು: ಎಂಆರ್‌ಎಫ್‌ ಮಾಗ್ರಿಪ್‌ ಎಫ್‌ಎಂಎಸ್‌ಸಿಐ ನ್ಯಾಷನಲ್‌ ರ್‍ಯಾಲಿಚಾಂಪಿಯನ್‌ಶಿಪ್‌– 2ಡಬ್ಲ್ಯು ದ್ವಿಚಕ್ರವಾಹನ ಸ್ಟೇಜ್‌ ರ್‍ಯಾಲಿಯ ಮೊದಲ ಸುತ್ತಿನಲ್ಲಿ ಟಿವಿಎಸ್‌ ರೇಸಿಂಗ್‌ ತಂಡದ ಹೊಸೂರಿನ ಅಬ್ದುಲ್‌ ವಾಹಿದ್‌ ತನ್ವೀರ್‌ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.

ನಾಲ್ಕು ಹಂತದಲ್ಲಿ ಒಟ್ಟು 138 ಕಿ.ಮಿ ದೂರವನ್ನು 53 ನಿಮಿಷ 43 ಸೆಕೆಂಡುಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದ್ದಾರೆ. ಸಾಮ್ಯುಯಲ್‌ ಜಾಕೊಬ್‌ ಅವರು 54 ನಿಮಿಷ 44 ಸೆಕೆಂಡುಗಳಲ್ಲಿ ಕ್ರಮಿಸಿ ದ್ವಿತೀಯ ಸ್ಥಾನ ಹಾಗೂ ಆರ್‌.ನಟರಾಜ್‌ ಅವರು 55 ನಿಮಿಷ 10 ಸೆಕೆಂಡುಗಳಲ್ಲಿ ಕ್ರಮಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜೇತರಿಗೆ ನಗದು ಬಹುಮಾನ ಪ್ರಥಮ ₹ 9 ಸಾವಿರ, ದ್ವಿತೀಯ– ₹ 7 ಸಾವಿರ, ತೃತೀಯ– ₹ 5 ಸಾವಿರ ಹಾಗೂ ಟ್ರೋಫಿ ವಿತರಿಸಲಾಯಿತು. ಚಿಕ್ಕಮಗಳೂರು ತಾಲ್ಲೂಕಿನ ವಸಂತ ಕೂಲ್‌ ಮತ್ತು ತಿಪ್ಪನಹಳ್ಳಿ ಎಸ್ಟೇಟ್‌ನಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ರ್‍ಯಾಲಿ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.