ಮೂಡಿಗೆರೆ: ಪಟ್ಟಣದ ಕೆ.ಎಂ ರಸ್ತೆಯಲ್ಲಿರುವ ಹಿರೇ ದೇವಿರಮ್ಮನ ಬನದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬುಧವಾರ 13ನೇ ವರ್ಷದ ವಾರ್ಷಿಕೋತ್ಸವ ಪೂಜೆ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ವಾಸ್ತು ಪೂಜೆ, ವಾಸ್ತು ಬಲಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಬುಧವಾರ ಬೆಳಿಗ್ಗೆ ಅಯ್ಯಪ್ಪಸ್ವಾಮಿ ಹಾಗೂ ಪರಿವಾರ ದೇವತೆಗಳಿಗೆ ಅಭಿಷೇಕ, ಗಣ ಹೋಮ, ದುರ್ಗಾ ಹೋಮ ನಡೆಸಲಾಯಿತು. ದೇವಾಲಯವನ್ನು ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು. ಮಹಾಮಂಗಳಾರತಿ ಬಳಿಕ ಸಾಮೂಹಿಕ ಅನ್ನ ಸಂತರ್ಪ, ರಾತ್ರಿ ಸಂಕ್ರಮಣ ವಿಶೇಷಪೂಜೆ, ಅಯ್ಯಪ್ಪಸ್ವಾಮಿ ಉತ್ಸವ ಜರುಗಿತು.
ದೇವಾಲಯ ಸಮಿತಿ ಅಧ್ಯಕ್ಷ ಟಿ.ಎ. ಮದೀಶ್, ಗೌರವಾಧ್ಯಕ್ಷ ಕೆ. ಮಂಚೇಗೌಡ, ಕಾರ್ಯದರ್ಶಿ ರಘು ಪೂಜಾರಿ, ಖಜಾಂಚಿ ಉಮೇಶ್, ಶ್ರೀಕಾಂತ್, ನರೇಂದ್ರ ಶೆಟ್ಟಿ, ನಿರ್ಮಲಾ ಮಂಚೇಗೌಡ, ಪ್ರವೀಣ್ ಮಗ್ಗಲಮಕ್ಕಿ, ವಾಸುದೇವ್, ವಿಜಯ್, ರವಿಶೆಟ್ಟಿ, ರಾಜು, ಪೂರ್ಣೇಶ್, ಆನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.