ADVERTISEMENT

ಮೂಡಿಗೆರೆ: ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 6:52 IST
Last Updated 5 ಜನವರಿ 2023, 6:52 IST
ಮೂಡಿಗೆರೆ ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬುಧವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಲಕ್ಷ್ಮಿ ಶ್ರೀನಿವಾಸ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಮೂಡಿಗೆರೆ ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬುಧವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಲಕ್ಷ್ಮಿ ಶ್ರೀನಿವಾಸ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.   

ಮೂಡಿಗೆರೆ: ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬುಧವಾರ ಕಲ್ಯಾಣೋತ್ಸವ ನಡೆಯಿತು. ವೇಣುಗೋಪಾಲ, ಪಂಚಮುಖಿ ಗಣಪತಿ, ಮಹಾಲಕ್ಷ್ಮಿ, ಆಂಜನೇಯ ಸಹಿತ ಪರಿವಾರ ದೇವತೆಗಳಿಗೆ ವಿವಿಧ ಅಭಿಷೇಕಗಳನ್ನು ನಡೆಸಲಾಯಿತು.

ಹಿರೇಮಗಳೂರಿನ ಕೋದಂಡರಾಮ ದೇವಾಲಯದ ಅರ್ಚಕ ಕಣ್ಣನ್ ನೇತೃತ್ವದ ತಂಡವು ಭೂದೇವಿ ಸಹಿತ ಲಕ್ಷ್ಮಿ ವೆಂಕಟೇಶ್ವರ ದೇವರ ಪ್ರತಿಷ್ಠಾಪನೆಗೊಳಿಸಿ, ಸ್ವಸ್ತಿವಾಚನ, ನಾಂದಿ, ವಿಶ್ವಕ್ಷೇನ ಆರಾಧನೆ, ಆಚಾರ್ಯ ಋತ್ವಿಗರಣೆ, ಮಂಗಳದ್ರವ್ಯಪೂಜೆ, ಭೂದೇವಿ ಸಹಿತ ಲಕ್ಷ್ಮಿ ವೆಂಕಟೇಶ್ವರನಿಗೆ ನಿಶ್ಚಿತಾರ್ಥಗಳನ್ನು ನಡೆಸಿ ಬಳಿಕ ಶ್ರೀನಿವಾಸ ತಿರುಕಲ್ಯಾಣೋತ್ಸವವನ್ನು ಮಾಡಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ತಿರುಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಕಲ್ಯಾಣೋತ್ಸವದ ಬಳಿಕ ಸಾಮೂಹಿಕ ಅನ್ನ ಸಂತರ್ಪಣೆ ನಡೆಸಲಾಯಿತು. ದೇವಾಲಯ ಸಮಿತಿಯ ಪದಾಧಿಕಾರಿಗಳು, ಅರ್ಚಕರು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.