ತರೀಕೆರೆ: ನಂದಿಬಟ್ಟಲು, ತಿಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ರಾತ್ರಿ ವೇಳೆ ಸಾಕು ಪ್ರಾಣಿಗಳ ಕಳ್ಳತನವಾಗುತ್ತಿದ್ದು, ಕಳ್ಳರ ಮಾಹಿತಿ ಪತ್ತೆಗೆ ನಂದಿಬಟ್ಟಲು ಕಾಲೋನಿ ಗ್ರಾಮದ ಮುಖ್ಯರಸ್ತೆ ಸರ್ಕಲ್‌ನಲ್ಲಿ ಗ್ರಾ.ಪಂ. ವತಿಯಿಂದ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಯಿತು.
ಲಿಂಗದಹಳ್ಳಿ ಪೊಲೀಸ್ ಠಾಣಾಧಿಕಾರಿ ಶಿವಕುಮಾರ್ ಸೂಚನೆ ನೀಡಿದ್ದರು. ಗ್ರಾ.ಪಂ. ಅಧ್ಯಕ್ಷೆ ಎನ್.ಜೆ. ಭದ್ರೇಗೌಡ ನೇತೃತ್ವ ವಹಿಸಿದ್ದರು.
ಎನ್.ಜೆ. ಭದ್ರೇಗೌಡ ಮಾತನಾಡಿ, ಜಾನುವಾರು ಕಳ್ಳತನ ಹಾವಳಿ ಮಿತಿ ಮೀರಿರುವ ಬಗ್ಗೆ ನಂದಿಬಟ್ಟಲು ಹುಣಸೆಬೈಲು, ಜೈಪುರ, ತಣಿಗೆಬೈಲು, ಮೊದಲಾದ ಗ್ರಾಮಗಳ ರೈತರು ನೀಡಿರುವ ದೂರಿನ ಮೇರೆಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.