ADVERTISEMENT

ಕ್ಷೇತ್ರ, ಪಕ್ಷಕ್ಕೆ ಅಪಾರ ನಷ್ಟ: ಸುಧಾಕರ್ ಶೆಟ್ಟಿ

ತಾಲ್ಲೂಕು ಜೆಡಿಎಸ್ ಘಟಕದಿಂದ ಚಿಂತಕ ಎಚ್.ಟಿ.ರಾಜೇಂದ್ರಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 6:25 IST
Last Updated 24 ಜುಲೈ 2025, 6:25 IST
ನರಸಿಂಹರಾಜಪುರದ ತಾಲ್ಲೂಕು ಜೆಡಿಎಸ್ ಘಟಕದಿಂದ ಎಚ್.ಟಿ.ರಾಜೇಂದ್ರ ಅವರಿಗೆ ಇಲ್ಲಿನ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮಾತನಾಡಿದರು
ನರಸಿಂಹರಾಜಪುರದ ತಾಲ್ಲೂಕು ಜೆಡಿಎಸ್ ಘಟಕದಿಂದ ಎಚ್.ಟಿ.ರಾಜೇಂದ್ರ ಅವರಿಗೆ ಇಲ್ಲಿನ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮಾತನಾಡಿದರು   

ನರಸಿಂಹರಾಜಪುರ: ಸಮಾಜವಾದಿ ಚಿಂತಕ ಹಾಗೂ ರಾಜ್ಯ ಜೆಡಿಎಸ್ ಘಟಕದ ಮಾಜಿ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಅವರ ನಿಧನದಿಂದ ಕ್ಷೇತ್ರದ ಜನರಿಗೆ ಹಾಗೂ ಜೆಡಿಎಸ್ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಹೇಳಿದರು.

ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಎಚ್.ಟಿ.ರಾಜೇಂದ್ರ ಅವರಿಗೆ ಶುಕ್ರವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಜೆಡಿಎಸ್ ನೆಲೆಕಳೆದು ಕೊಂಡ ಸಂದರ್ಭದಲ್ಲಿ 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವ ಮೂಲಕ ಪಕ್ಷಕ್ಕೆ ಭದ್ರನೆಲೆ ಕಲ್ಪಿಸಿದರು. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿತ್ವ ಹೊಂದಿದ್ದ ರಾಜಕಾರಣಿಯನ್ನು ಜನರು ಕೈಬಿಟ್ಟರು. ಅವರ ಯೋಚನೆ, ಚಿಂತನೆಗಳಿಂದ 2008ರಲ್ಲಾದರೂ ಅವರು ಶಾಸಕರಾಗ ಬೇಕಿತ್ತು. ಆದರೆ, ನ್ಯಾಯಯುತ ಬದುಕುವವರಿಗೆ ಜನರು ಕೈಹಿಡಿಯಲಿಲ್ಲ. ರಾಜೇಂದ್ರ ಅವರು ಶಾಸಕರಾಗಿದ್ದರೆ ಕ್ಷೇತ್ರದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿತ್ತು. ಅವರಲಿದ್ದ ಪಕ್ಷ ನಿಷ್ಠೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡರೆ ಅದೇ ಅವರಿಗೆ ಕೊಡುವ ಗೌರವವಾಗಿದೆ. ಜೆಡಿಎಸ್ ಪಕ್ಷ ಇರುವವರೆಗೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಲಾಗುವುದು ಎಂದರು.

ADVERTISEMENT

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜೇಂದ್ರ ಅವರು ಕೇವಲ ವ್ಯಕ್ತಿಯಲ್ಲ ಅವರು ಶಕ್ತಿಯಾಗಿದ್ದರು. ಶಿಕ್ಷಣ ತಜ್ಞ, ಪ್ರಗತಿಪರ ಕೃಷಿಕ, ಸದಾ ಅಧ್ಯಯನ ಶೀಲ ವ್ಯಕ್ತಿಯಾಗಿದ್ದರು. ರಾಜ್ಯಮಟ್ಟದ ನಾಯಕರಲ್ಲಿರಬೇಕಾದ ಎಲ್ಲ ಅರ್ಹತೆ ಅವರಲ್ಲಿತ್ತು. ಅವರ ಆದರ್ಶವನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.

ಜೆಡಿಎಸ್ ಹಿರಿಯ ಮುಖಂಡ ಬಿ.ಕೆ.ಜಾನಕೀರಾಂ ಮಾತನಾಡಿ, ರಾಜೇಂದ್ರ ಅವರು ಸರ್ವಜನಾಂಗದ ಗೌರವಕ್ಕೆ ಪಾತ್ರವಾಗಿದ್ದರು. ನುಡಿದಂತೆ ನಡೆಯುವ ವ್ಯಕ್ತಿತ್ವ, ಅಪಾರ ಜ್ಞಾನ ಭಂಡಾರ ಅವರಲಿತ್ತು ಎಂದರು.

ಜೆಡಿಎಸ್ ಮುಖಂಡರಾದ ಕಣಿವೆ ವಿನಯ್, ಎಸ್.ಎಸ್.ಶಾಂತಕುಮಾರ್, ಎನ್.ಎಂ.ಮರುಳಪ್ಪ ಮಾತನಾಡಿದರು.

ಜೆಡಿಎಸ್ ಮುಖಂಡರಾದ ಕೆ.ಎನ್.ಶಿವದಾಸ್, ಬಿ.ಟಿ.ರವಿ, ಎಂ.ಓ.ಜೋಯಿ, ದೀಪಕ್, ನಾಗೇಶ್, ಗೋವಿಂದ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.