ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆಯಿಂದ ಎಡಬಿಡದೇ ಮಳೆ ಸುರಿದಿದೆ.
ಮಧ್ಯಾಹ್ನದ ವೇಳೆಗೆ ಅಲ್ಪ ವಿರಾಮ ನೀಡಿದ್ದ ಮಳೆ ಸಂಜೆ 5ರ ನಂತರ ಭಾರಿ ಪ್ರಮಾಣದಲ್ಲಿ ಸುರಿಯಿತು. ತಾಲ್ಲೂಕಿನ ಅಳೇಹಳ್ಳಿ, ಹಂತುವಾನಿ, ಗಬ್ಬಿಗಾ, ಹೊಡೆಯಾಲ, ಬಿ.ಎಚ್.ಕೈಮರ, ದ್ವಾರಮಕ್ಕಿ, ನೇತ್ಕಲ್ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಮೇಲೆ ಮರಬಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಕಡಹಿನಬೈಲು ಗ್ರಾ.ಪಂ. ವ್ಯಾಪ್ತಿಯ ನೇರಲೆಕೊಪ್ಪ ಗ್ರಾಮದ ಎ.ಬಿ.ಪ್ರಶಾಂತ್ ಎಂಬುವರ ಕೊಟ್ಟಿಗೆ ಮೇಲೆ ಮರಬಿದ್ದು, ಕೊಟ್ಟಿಗೆಯ ಚಾವಣಿಗೆ ಹಾನಿ ಸಂಭವಿಸಿದೆ.
ಶನಿವಾರದಿಂದ ಭಾನುವಾರ ಬೆಳಿಗ್ಗೆವರೆಗೆ ನರಸಿಂಹರಾಜಪುರದಲ್ಲಿ 4.35 ಸೆಂ.ಮೀ, ಬಾಳೆಹೊನ್ನೂರಿನಲ್ಲಿ 2.10 ಸೆಂ.ಮೀ ಹಾಗೂ ಮೇಗರಮಕ್ಕಿಯಲ್ಲಿ 1.4 ಸೆಂ.ಮೀ ಮಳೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.