ಚಿಕ್ಕಮಗಳೂರು: ಆಪರೇಷನ್ ಸಿಂಧೂರ ಮೂಲಕ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಭಾರತೀಯ ಯೋಧರ ಸೇವಾ ಕಾರ್ಯ ಶ್ಲಾಘಿಸಿ ಕನ್ನಡ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗುರುವಾರ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ. ರಾಜೇಗೌಡ, ‘ಉಗ್ರರನ್ನು ಮಟ್ಟಹಾಕಲು ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ಕೈಗೊಂಡಿದೆ. ಅದಕ್ಕೆ ಕೈಜೋಡಿಸಿರುವ ಸೈನಿಕರು ಉಗ್ರರ ತಾಣಗಳನ್ನು ಪುಡಿಗೊಳಿಸಿ ತಕ್ಕ ಉತ್ತರ ನೀಡಿರುವುದು ಹೆಮ್ಮೆಯ ಸಂಗತಿ’ ಎಂದರು.
ಕನ್ನಡ ಸೇನೆ ವಕ್ತಾರ ಹುಣಸೆಮಕ್ಕಿ ಲಕ್ಷ್ಮಣ್ ಮಾತನಾಡಿ, ‘ಪಾಕಿಸ್ತಾನವು ಭಾರತದ ತಂಟೆಗೆ ಬಂದರೆ ಭೂಪಟದಲ್ಲಿ ಆ ದೇಶದ ನಕ್ಷೆಯೇ ಮರೆಯಾಗಲಿದೆ ಎಂಬುದನ್ನು ಆಪರೇಷನ್ ಸಿಂಧೂರ ತಿಳಿಸಿದೆ’ ಎಂದು ಹೇಳಿದರು.
ಮುಖಂಡರಾದ ಅನ್ವರ್, ಜಯಪ್ರಕಾಶ್, ಶಂಕರೇಗೌಡ, ಪಾಲಾಕ್ಷಿ, ಜೀವನ್, ನವೀನ್‌ಕುಮಾರ್, ಅನಿಲ್‌ಆನಂದ್, ಮೋಹನ್, ಟೋನಿ, ಭಾರತಿ, ದೇವರಾಜ್, ನಿಲೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.