ADVERTISEMENT

‘ಕಲೆಗೆ ತಿಪ್ಪೇಸ್ವಾಮಿ ಕೊಡುಗೆ ಅಪಾರ’

ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 16:54 IST
Last Updated 30 ನವೆಂಬರ್ 2021, 16:54 IST
ಚಿಕ್ಕಮಗಳೂರಿನಲ್ಲಿ ಮಂಗಳವಾರ ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮ – 2021 ಉದ್ಘಾಟನಾ ಸಮಾರಂಭದಲ್ಲಿ ಎಸ್‌.ಪಿ. ಜಯಣ್ಣಾಚಾರ್‌, ಎಂ.ರಾಮಮೂರ್ತಿ, ಬಿ.ಎಚ್.ನರೇಂದ್ರ ಪೈ, ಎಂ.ಎನ್‌.ಷಡಕ್ಷರಿ, ಕಾಂತರಾಜು, ಲಕ್ಷ್ಮಿ ಮೈಸೂರು, ಲಿಂಗರಾಜು, ವಿಶ್ವಕರ್ಮ ಆಚಾರ್ಯ ಪಾಲ್ಗೊಂಡಿದ್ದರು
ಚಿಕ್ಕಮಗಳೂರಿನಲ್ಲಿ ಮಂಗಳವಾರ ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮ – 2021 ಉದ್ಘಾಟನಾ ಸಮಾರಂಭದಲ್ಲಿ ಎಸ್‌.ಪಿ. ಜಯಣ್ಣಾಚಾರ್‌, ಎಂ.ರಾಮಮೂರ್ತಿ, ಬಿ.ಎಚ್.ನರೇಂದ್ರ ಪೈ, ಎಂ.ಎನ್‌.ಷಡಕ್ಷರಿ, ಕಾಂತರಾಜು, ಲಕ್ಷ್ಮಿ ಮೈಸೂರು, ಲಿಂಗರಾಜು, ವಿಶ್ವಕರ್ಮ ಆಚಾರ್ಯ ಪಾಲ್ಗೊಂಡಿದ್ದರು   

ಚಿಕ್ಕಮಗಳೂರು: ‘ಪಿ.ಆರ್‌. ತಿಪ್ಪೇಸ್ವಾಮಿ ಅವರು ತಾವು ಬೆಳೆಯುವುದರ ಜೊತೆಗೆ ಇತರ ಕಲಾವಿದವರಿಗೆ ಪ್ರೋತ್ಸಾಹ ನೀಡಿ ಬೆಳೆಸಿದರು. ಅವರೊಬ್ಬ ಅಪರೂಪದ ಕಲಾವಿದ’ ಎಂದು ಶಿಲ್ಪಿ ಎಸ್‌.ಪಿ. ಜಯಣ್ಣಾಚಾರ್‌ ಬಣ್ಣಿಸಿದರು.

ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಂತಿನಿಕೇತನ ಚಿತ್ರಕಲಾ ಮಹಾ ವಿದ್ಯಾಲಯದ ಸಹಯೋಗದಲ್ಲಿ ಶಾಂತಿ ನಿಕೇತನ ಚಿತ್ರಕಲಾ ವಿದ್ಯಾಲಯದಲ್ಲಿ ಆಯೋಜಿಸಿರುವ ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮ – 2021 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಹಳಷ್ಟು ಕಲಾವಿದರ ಜೀವನ ಚರಿತ್ರೆಗಳ ಕೃತಿಗಳನ್ನು ರಚಿಸಿ ಉಪಕಾರ ಮಾಡಿದ್ದಾರೆ. ಕಲಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ’ ಎಂದರು.

ADVERTISEMENT

‌ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಬಹಳಷ್ಟು ಅವಿಷ್ಕಾರಗಳಾಗಿವೆ.
ಕಲಾ ಕ್ಷೇತ್ರಕ್ಕೂ ತಂತ್ರಜ್ಞಾನ ಸಹಕಾರಿಯಾಗಿದೆ. ಕಲಾವಿದರು ಅದ್ಭುತ ಸಾಧನೆ ಮೆರೆಯುತ್ತಿದ್ದಾರೆ ಎಂದು ಹೇಳಿದರು.

ಕಲಾವಿದರಲ್ಲಿ ಕಲ್ಮಶ, ಕ್ರೌರ್ಯ ಇರುವುದಿಲ್ಲ. ಬಡತನ ಇದ್ದರೂ ಕಲಾವಿದರು ಖುಷಿಯಾಗಿಯೇ ಇರುತ್ತಾರೆ. ಕಲೆಯ ಅಭಿವ್ಯಕ್ತಿಯಲ್ಲೇ ತೃಪ್ತಿ ಪಡುತ್ತಾರೆ ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಭಾರತ್‌ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್‌.ನರೇಂದ್ರ ಪೈ ಮಾತನಾಡಿ, ಕಲೆಗೆ ಸಂಬಂಧಿಸಿದ ಇಂಥ ಕಾರ್ಯಕ್ರಮವನ್ನು ನಗರದಲ್ಲಿ ಏರ್ಪಡಿ ಸಿರುವುದು ಶ್ಲಾಘನೀಯ ಎಂದು ಹೇಳಿದರು.

ಪಿಆರ್‌ಟಿ ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಸಿ.ಮಹದೇವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉದ್ಯಮಿ ಡಿ.ಎಚ್‌.ನಟರಾಜ್‌, ಶಿಲ್ಪ ಕಲಾವಿದ ಎಂ.ರಾಮಮೂರ್ತಿ, ಸ್ಕೌಟ್ಸ್‌– ಗೈಡ್ಸ್‌ ಜಿಲ್ಲಾ ಮುಖ್ಯಸ್ಥ ಎಂ. ಷಡಕ್ಷರಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯೆ ಲಕ್ಷ್ಮಿ ಮೈಸೂರು, ಕಲಾವಿದರಾದ ಕಾಂತರಾಜು, ಎಂ.ಎಸ್‌.ಲಿಂಗರಾಜು, ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.