ADVERTISEMENT

‘ಪ್ರಕೃತಿಗೆ ಪೂರಕವಾಗಿ ಬದುಕಬೇಕು’

ತುಂಬಿದ ಅಯ್ಯನಕೆರೆ: ಕಾಂಗ್ರೆಸ್‌ ಮುಖಂಡರಿಂದ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 4:23 IST
Last Updated 8 ಆಗಸ್ಟ್ 2022, 4:23 IST
ಕಡೂರು ತಾಲ್ಲೂಕಿನ ಸಖರಾಯಪಟ್ಟಣದ ಅಯ್ಯನಕೆರೆಗೆ ಭಾನುವಾರ ಕಾಂಗ್ರೆಸ್‌ ಮುಖಂಡರು ಬಾಗಿನ ಸಮರ್ಪಿಸಿದರು
ಕಡೂರು ತಾಲ್ಲೂಕಿನ ಸಖರಾಯಪಟ್ಟಣದ ಅಯ್ಯನಕೆರೆಗೆ ಭಾನುವಾರ ಕಾಂಗ್ರೆಸ್‌ ಮುಖಂಡರು ಬಾಗಿನ ಸಮರ್ಪಿಸಿದರು   

ಚಿಕ್ಕಮಗಳೂರು: ಪ್ರಕೃತಿ ಎಲ್ಲಕ್ಕಿಂತ ದೊಡ್ಡ ದೈವ. ಅದಕ್ಕೆ ಪೂರಕವಾಗಿ ನಾವುಗಳು ಬದುಕಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.

ಸಖರಾಯಪಟ್ಟಣದ ಅಯ್ಯನಕೆರೆ ಯಲ್ಲಿ ಭಾನುವಾರ ಬ್ಲಾಕ್‌ ಕಾಂಗ್ರೆಸ್‌ ಏರ್ಪಡಿಸಿದ್ದ ಬಾಗಿನ ಸಮರ್ಪಣೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಅಧಿಕ ಮಳೆಯಿಂದಾಗಿ ಕೆರೆ ತುಂಬಿ ಜನರ ಮೊಗದಲ್ಲಿ ಮಂದಹಾಸ ತಂದಿದೆ. ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಅದನ್ನು ಸಂರ
ಕ್ಷಿಸುವ ಕೆಲಸವಾಗಬೇಕು ಎಂದರು.

ADVERTISEMENT

ಕ್ಷೇತ್ರದ ಶಾಸಕರು ‘ಭಗೀರಥ’ ಎಂದು ಕರೆಸಿಕೊಳ್ಳುತ್ತಾರೆ. ಆದರೆ ನಗರದ ಸನಿಹದಲ್ಲಿನ ಬಸವನಹಳ್ಳಿ, ಕೋಟೆ ಕೆರೆಗಳನ್ನು ಅಭಿವೃದ್ಧಿಪಡಿಸಿ, ನೀರು ಯಾಕೆ ತುಂಬಿಸಿಲ್ಲ ಎಂದು ಅವರು ಟೀಕಿಸಿದರು.

ಬಸವತತ್ತ್ವ ಪೀಠದ ಡಾ.ಬಸವ ಮರುಳಸಿದ್ದಸ್ವಾಮಿ ಮಾತನಾಡಿ, ನೀರು ಸಕಲ ಜೀವ ರಾಶಿಗಳಿಗೂ ಅಗತ್ಯವಾಗಿ ಬೇಕು. ಕೆರೆ ಸಂಸ್ಕೃತಿಯನ್ನು ತಲೆಮಾರುಗಳಿಗೆ ಬೆಸೆಯುತ್ತದೆ. ನೀರಿನ ಗುಣಸ್ವಭಾವದಂತೆ ಮನುಷ್ಯ ಎಲ್ಲರೊಂದಿಗೆ ಬೆರೆಯಬೇಕು. ಅದನ್ನು ಉಳಿಸಿ ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಅಬ್ಬೆ ಜಲಪಾತದಿಂದ ಗುರುತ್ವಾಕರ್ಷಣೆಯ ಮೂಲಕ ಮದಗದ ಕೆರೆ ಮತ್ತು ಅಯ್ಯನಕೆರೆ ತುಂಬಿಸುವ ಯೋಜನೆ ಸಿದ್ಧವಾಗಿತ್ತು. ಆದರೆ ಸರ್ಕಾರ ಬದಲಾಗಿ ಯೋಜನೆ ಕೈಗೂಡಿಲ್ಲ ಎಂದರು.

ಮುಖಂಡರಾದ ಡಾ.ವಿಜಯ
ಕುಮಾರ್, ರೇಖಾ ಹುಲಿಯಪ್ಪಗೌಡ, ಎ.ಎನ್.ಮಹೇಶ್, ಹೇಮಾವತಿ, ಮಂಜೇಗೌಡ, ರಸೂಲ್ ಖಾನ್‌, ಸಂದೀಪ್, ಪವನ್, ಮಂಜುನಾಥ್, ನಟರಾಜ್, ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.