ADVERTISEMENT

ಮೂಡಿಗೆರೆ | 80 ಮೂಟೆ ಕಾಳುಮೆಣಸು ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:12 IST
Last Updated 16 ನವೆಂಬರ್ 2025, 5:12 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಮೂಡಿಗೆರೆ: ಪಟ್ಟಣದ ನೀಲಂ ಸೇಠ್ ಅವರ ಕಾಳುಮೆಣಸು ಗೋದಾಮಿನಲ್ಲಿ ನಡೆದ ಕಾಳುಮೆಣಸು ಕಳ್ಳತನ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

ADVERTISEMENT

ತಾಲ್ಲೂಕಿನ ಹೆಸ್ಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪುನಗರದ ಸಬೀನಾ ಬಂಧಿತ ಆರೋಪಿ.

ಪಟ್ಟಣದಲ್ಲಿರುವ ನೀಲಂ‌ ಸೇಠ್ ಎಂಬುವರಿಗೆ ಸೇರಿದ ಗೋದಾಮಿನಲ್ಲಿ 80 ಮೂಟೆ ಕಾಳು ಮೆಣಸು ಕಳವಾಗಿದ್ದು, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಕ್ಯಾಮೆರಾ ಹಾಗೂ ಕಳ್ಳತನ‌ ನಡೆಸಿರುವ ಮಾದರಿಯಲ್ಲಿ ಖಚಿತ ಮಾಹಿತಿ ಆಧರಿಸಿ ಬಾಪುನಗರದ ಸಬೀನಾ ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆ, ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾದ ಇನ್ನೊಬ್ಬ ಮಹಿಳೆ‌ ಹಾಗೂ ಇಬ್ಬರು ಪುರುಷ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಪಿಐ ರಾಜಶೇಖರ್, ಪಿಎಸ್‌ಐ ಶ್ರೀನಾಥ್ ರೆಡ್ಡಿ, ಶಶಿ ಹಾಗೂ ಪೊಲೀಸ್ ಸಿಬ್ಬಂದಿ ವೈಭವ್, ಸಚಿನ್, ಮಹೇಂದ್ರ, ಮಲ್ಲಿಕಾರ್ಜುನ, ವಿನಯ್, ಮನು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.