ADVERTISEMENT

ಶೃಂಗೇರಿ | ವೈಯಕ್ತಿಕ ಆರೋಗ್ಯ, ಕುಟುಂಬ ಸಾಮರಸ್ಯಕ್ಕೆ ಆದ್ಯತೆ ನೀಡಿ- ಕೆ.ಫಾಲಾಕ್ಷ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 6:42 IST
Last Updated 8 ಫೆಬ್ರುವರಿ 2026, 6:42 IST
ಶೃಂಗೇರಿಯ ಈಡಿಗರ ಸಮೂದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಫಾಲಾಕ್ಷ ಉದ್ಘಾಟಿಸಿದರು
ಶೃಂಗೇರಿಯ ಈಡಿಗರ ಸಮೂದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಫಾಲಾಕ್ಷ ಉದ್ಘಾಟಿಸಿದರು   

ಶೃಂಗೇರಿ: ‘ನಾವು ಸಂಘಟಿತರಾಗಿ ಪರಸ್ಪರ ಬೆಳೆಯುತ್ತಾ ನಿಃಸ್ವಾರ್ಥ ಸೇವೆ ಮಾಡಬೇಕು. ವೈಯಕ್ತಿಕ ಆರೋಗ್ಯ ಮತ್ತು ಕೌಟುಂಬಿಕ ಸಾಮರಸ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು’ ಎಂದು ರೋಟರಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಫಾಲಾಕ್ಷ ಹೇಳಿದರು.

ಶೃಂಗೇರಿಯ ಈಡಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರೋಟರಿ ಸಂಸ್ಥೆ ಜಗತ್ತಿನಾದ್ಯಂತ ನಿರಂತರವಾಗಿ ಸುಮಾರು 100 ವರ್ಷಗಳಿಂದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇತ್ತೀಚಿಗೆ 2ಸಾವಿರ ಮಂದಿಗೆ ಹೃದಯ ಚಿಕಿತ್ಸೆ, 20 ಸಾವಿರ ಮಂದಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಗಿದೆ. ಶೃಂಗೇರಿ ರೋಟರಿ ಕ್ಲಬ್ ಕೆಲವೇ ದಿನಗಳಲ್ಲಿ 65ಕ್ಕೂ ಹೆಚ್ಚು ಗುಣಾತ್ಮಕವಾದ ಕಾರ್ಯಕ್ರಮಗಳನ್ನು ನಡೆಸಿ ರೋಟರಿ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದು ಕೊಂಡಿದೆ ಎಂದರು.

ADVERTISEMENT

ತಂದೆ–ತಾಯಿಯನ್ನು ಜಗತ್ತಿನ ಶ್ರೇಷ್ಠ ಗುರುವೆಂದು ಗೌರವಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಗುರುತಿಸಿ ಗೌರವಿಸುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಈ ಉದ್ದೇಶದಿಂದ ತಾಲ್ಲೂಕಿನ 135 ಸಾಧಕರನ್ನು ರೋಟರಿ ಕ್ಲಬ್ ಗುರುತಿಸಿ ಸನ್ಮಾನಿಸಿದೆ. ಸಾಂಸ್ಕೃತಿಕ, ವೈಚಾರಿಕ ಹಾಗೂ ಸೇವಾ ಕಾರ್ಯಗಳೊಂದಿಗೆ ಅಗತ್ಯವಿರುವವರಿಗೆ ನಗದು ನೆರವು ನೀಡಲಾಗಿದೆ. ಇದರಿಂದ ಕ್ಲಬ್‌ನ ಗೌರವ ಹೆಚ್ಚಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ ಹೇಳಿದರು.

ವಲಯ 6ರ ಸಹಾಯಕ ಗವರ್ನರ್ ರಾಜಗೋಪಾಲ ಜೋಷಿ ಮಾತನಾಡಿದರು. ರಾಷ್ಟ್ರಮಟ್ಟದಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿ ಉನ್ನತಿ ಅವರನ್ನು ಸನ್ಮಾನಿಸಿದರು. ‌‌ವಿವಿಧ ಶಾಲಾ ಕಾಲೇಜುಗಳಿಗೆ ಧ್ವನಿವರ್ಧಕ, ಊಟದ ತಟ್ಟೆಯ ಸ್ಟ್ಯಾಂಡ್, ಫ್ಯಾನ್ ವಿತರಿಸಲಾಯಿತು. ವಲಯ ಸೇನಾನಿ ಮಹೇಶ್ ಡಿ., ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗ್ಡೆ, ಇನ್ನರ್‌ವೀಲ್‌ ಅಧ್ಯಕ್ಷೆ ಮಂಜುಳಾ ಸುಬ್ರಹ್ಮಣ್ಯ, ರತ್ನಾ ನಾಗೇಶ್, ಕ್ಲಬ್‍ಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.