ADVERTISEMENT

ಚಿಕ್ಕಮಗಳೂರು: ಜನ ಜಂಗುಳಿ ಚದುರಿಸಲು ಲಾಠಿ ಏಟು

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 12:53 IST
Last Updated 8 ಏಪ್ರಿಲ್ 2020, 12:53 IST
ಚಿಕ್ಕಮಗಳೂರು ಎಪಿಎಂಸಿ ಪ್ರಾಂಗಣದ ದ್ವಾರದಲ್ಲಿ ಬುಧವಾರ ಬೆಳಿಗ್ಗೆ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು.
ಚಿಕ್ಕಮಗಳೂರು ಎಪಿಎಂಸಿ ಪ್ರಾಂಗಣದ ದ್ವಾರದಲ್ಲಿ ಬುಧವಾರ ಬೆಳಿಗ್ಗೆ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು.   

ಚಿಕ್ಕಮಗಳೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಬುಧವಾರ ಜನ ಜಂಗುಳಿ ಚದುರಿಲು ಪೊಲೀಸರು ಲಾಠಿ ಬೀಸಿದರು.

ರೈತರು ಮಾರಾಟಕ್ಕೆ ತರಕಾರಿ, ಇತರ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದರು, ಖರೀದಿಗೆ ಚಿಲ್ಲರೆ ವ್ಯಾಪಾರಸ್ಥರು ಜಮಾಯಿಸಿದ್ದರು. ಎಪಿಎಂಸಿ ಆವರಣದ ದ್ವಾರದಲ್ಲಿ ನೂಕು ನುಗ್ಗಲು ಏರ್ಪಟ್ಟಿತ್ತು. ಸಾಮಾಜಿಕ ಅಂತರ ಕಾಪಾಡಿಲ್ಲ ಎಂದು ಪೊಲೀಸರು ಲಾಠಿ ಏಟು ನೀಡಿದ್ದಾರೆ.

‘ಸಾಮಾಜಿಕ ಅಂತರ ಕಾಪಾಡಿರಲಿಲ್ಲ. ಒಟ್ಟೊಟ್ಟಿಗೆ ಗುಂಪಾಗಿದ್ದರು. ಲಾಠಿ ಏಟು ಕೊಟ್ಟು, ಅಂತರದಲ್ಲಿ ನಿಲ್ಲಿಸಿದೆವು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.