ತರೀಕೆರೆ: ಬಿಜೆಪಿ ತರೀಕೆರೆ ಮಂಡಲ ಅಧ್ಯಕ್ಷರಾಗಿ ಪ್ರತಾಪ್ ಗರಗದಹಳ್ಳಿ ಪುನರಾಯ್ಕೆಯಾದರು.
ಸಂಘಟನಾ ಪರ್ವ ಹಾಗೂ ಮಂಡಲದ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಶೆಟ್ಟಿ, ಮಾಜಿ ಶಾಸಕ ಡಿ.ಎಸ್. ಸುರೇಶ್ ನೆರವೇರಿಸಿದರು. ಚುನಾವಣಾ ಅಧಿಕಾರಿ ವೀಣಾ ಶೆಟ್ಟಿ ಇದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಪುನರಾಯ್ಕೆಯಾದ ಪ್ರತಾಪ್ ಗರಗದಹಳ್ಳಿ ಅವರನ್ನು ಮುಖಂಡರು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.