ಬಾಳೆಹೊನ್ನೂರು: ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ವ್ಯಕ್ತಿಯ ಶಿರಚ್ಛೇದನವನ್ನು ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಇಂಪಾಲ್ ನಾಸೀರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಸ್ಲಿಂ ಧರ್ಮ ಶಾಂತಿಯ ಸಂಕೇತವಾಗಿದೆ. ಹಿಂಸೆ ಪರಿಹಾರವೂ ಅಲ್ಲ, ಉತ್ತರವೂ ಅಲ್ಲ. ರಾಜಸ್ಥಾನದಲ್ಲಿ ನಡೆದ ಹಿಂಸೆ ಕ್ರೌರ್ಯದ ಪರಮಾವಧಿಯಾಗಿದ್ದು ಸಮರ್ಥಿಸಲು ಸಾಧ್ಯವಿಲ್ಲ. ಅದೊಂದು ಕುರುಡು ಹಿಂಸೆ. ಧರ್ಮಾಂಧರು ನಡೆಸಿರುವ ಕೃತ್ಯವಾಗಿದೆ. ಅಲ್ಲಿನ ರಾಜ್ಯಸರ್ಕಾರ ಕಾನೂನು ಕ್ರಮದ ಮೂಲಕ ಕೊಲೆಗಡುಕನಿಗೆ ಅತಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಹೋದರರಂತೆ ಬಾಳುತ್ತಿರುವ ನಾವುಗಳು ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ನೀಡುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.