ADVERTISEMENT

ಆರ್‌.ಜಿ.ಹಳ್ಳಿ: 31 ಮಂದಿಗೆ ಕೋವಿಡ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಮೇ 2021, 16:46 IST
Last Updated 7 ಮೇ 2021, 16:46 IST
ಚಿಕ್ಕಮಗಳೂರು ತಾಲ್ಲೂಕಿನ ಆವತಿ ಗ್ರಾಮದಲ್ಲಿ ತಹಶೀಲ್ದಾರ್‌ ಕಾಂತರಾಜ್, ಡಿವೈಎಸ್ಪಿ ಪ್ರಭು, ಇತರರು ಪರಿಶೀಲನೆ ಮಾಡಿದರು.
ಚಿಕ್ಕಮಗಳೂರು ತಾಲ್ಲೂಕಿನ ಆವತಿ ಗ್ರಾಮದಲ್ಲಿ ತಹಶೀಲ್ದಾರ್‌ ಕಾಂತರಾಜ್, ಡಿವೈಎಸ್ಪಿ ಪ್ರಭು, ಇತರರು ಪರಿಶೀಲನೆ ಮಾಡಿದರು.   

ಚಿಕ್ಕಮಗಳೂರು: ತಾಲ್ಲೂಕಿನ ಆವತಿ ಹೋಬಳಿಯ ಆರ್.ಜಿ.ಹಳ್ಳಿಯಲ್ಲಿ 31ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ತಹಶೀಲ್ದಾರ್‌ ಡಾ.ಕೆ.ಜೆ.ಕಾಂತರಾಜ್, ಡಿವೈಎಸ್ಪಿ ಪ್ರಭು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಾರಾನಾಥ್, ಆವತಿ ಹೋಬಳಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮಂಜುನಾಥ , ವೈದ್ಯಾಧಿಕಾರಿ ರವೀಶ್ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬ್ರಾಹ್ಮಣ ಮಹಾಸಭಾ ಹಾಗೂ ಬಾರ್‌ ಕೌನ್ಸಿಲ್‌ ಸೋಸಿಯೇಷನ್ ಅಧ್ಯಕ್ಷ ವಿ.ಟಿ.ಥಾಮಸ್ ಅವರು ನೀಡಿದ ಅಕ್ಕಿಯನ್ನು ಹತ್ತು ಕುಟುಂಬಗಳಿಗೆ ವಿತರಿಸಲಾಯಿತು ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಲ್ಲಿ ಚಿಕ್ಕಮಗಳೂರಿನ ಆಸ್ಪತ್ರೆಗೆ ಸಾಗಿಸಲು ಆರೋಗ್ಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕುಟುಂಬಗಳಿಗೆ ಪಡಿತರವನ್ನು ಮನೆ ಬಾಗಿಲಿಗೆ ತಲಪಿಸಿ ವರದಿ ನೀಡುವಂತೆ ಆಹಾರ ನಿರೀಕ್ಷಕ, ರಾಜಸ್ವ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಗ್ರಾಮದ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಆತ್ಮಸ್ಥೈರ್ಯ ತುಂಬಲಾಯಿತು ಎಂದು ತಹಶೀಲ್ದಾರ್‌ ಕಾಂತರಾಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT