
ತರೀಕೆರೆ: ಪಟ್ಟಣದ ಶ್ರೀಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಪ್ರದರ್ಶನ ಸಮಾರಂಭಕ್ಕೆ, ಶ್ರೀರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್. ರಮೇಶ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ರಾಯರಿದ್ದಾರೆ ಭಾಗ-2 ಕಿರುಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಸ್‌ಕೆಎಸ್ ಸಿದ್ಧಗಂಗಾ ಸಿನಿಮಾಸ್ ಅವರ ವಿಜಯ್ ತರೀಕೆರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಸ್ಥಳೀಯ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ’ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ನರೇಂದ್ರ ಮಾತನಾಡಿ, ಯುವ ಕಲಾವಿದರು ಸೇರಿಕೊಂಡು ರಾಯರಿದ್ದಾರೆ ಎಂಬ ಭಕ್ತಿಪೂರ್ವಕ ಕಿರುಚಿತ್ರ ನಿರ್ಮಿಸಿರುವುದು ಹೆಮ್ಮೆಯ ವಿಚಾರ ಎಂದರು.
ಪ್ಲಾರೆನ್ಸ್ ನೈಟಿಂಗೆಲ್ ಪ್ರಶಸ್ತಿ ಪುರಸ್ಕೃತ ರೇವಣ್ಣ, ಪುರಸಭೆ ಮಾಜಿ ಸದಸ್ಯ ಟಿ.ಜಿ. ಸದಾನಂದ್, ಕಸಾಪ ತಾಲ್ಲೂಕು ಮಾಜಿ ಅಧ್ಯಕ್ಷ ನವೀನ್ ಪೆನ್ನಯ್ಯ, ಚುಟುಕು ಸಾಹಿತಿ ಮಧುಸೂದನ್ ಕಕ್ರಿ ಮಾತನಾಡಿದರು.
ಕಿರು ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರಾದ ಮಂಜುಳ ವಿಜಯಕುಮಾರ್, ಚಂದ್ರಶೇಖರ್, ವಿಜಯ್ ಅವರನ್ನು ಗೌರವಿಸಲಾಯಿತು. ಕಲಾವಿದರಾದ ಗೌತಮ್, ದಿನೇಶ್, ಮನ್ವಿತ್ ದೇವು, ವಿವೇಕ್, ಲೇಖಕ ತ.ಮ. ದೇವಾನಂದ, ಶಾಂತ ಅಭಿಮಾನಿ ಬಳಗದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.