ADVERTISEMENT

ರಸ್ತೆ ಸಂಚಾರವೇ ದುಸ್ತರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 11:36 IST
Last Updated 7 ನವೆಂಬರ್ 2022, 11:36 IST
ಪಟ್ಟಣದ ಒಂದನೇ ವಾರ್ಡ್ ನಲ್ಲಿ ರಸ್ತೆಗಳು ಸಂಚಾರಯೋಗ್ಯವಾಗಿಲ್ಲದಿರುವುದು.
ಪಟ್ಟಣದ ಒಂದನೇ ವಾರ್ಡ್ ನಲ್ಲಿ ರಸ್ತೆಗಳು ಸಂಚಾರಯೋಗ್ಯವಾಗಿಲ್ಲದಿರುವುದು.   

ಕಡೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ಎರಡನೇ ವಾರ್ಡ್‌ನಲ್ಲಿ ಎರಡು ವರ್ಷಗಳಿಂದಲೂ ರಸ್ತೆ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯದೆ ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದಾರೆ.

ಈ ವಾರ್ಡ್‌ನಲ್ಲಿ ಸುಮಾರು 13 ಕ್ಕೂ ಹೆಚ್ಚು ಕಿರಿದಾದ ಗಲ್ಲಿ ರಸ್ತೆಗಳಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಅವುಗಳ ಕಡೆಗೆ ಪುರಸಭೆಯ ಗಮನ ಹರಿಸಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಸಂಚರಿಸಲೂ ತೊಂದರೆಯಾಗಿದೆ ಎಂಬುದು ಇಲ್ಲಿನ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಣದ ಛತ್ರದ ಬೀದಿಯಲ್ಲಿರುವ ವೀರಭದ್ರ ದೇವಸ್ಥಾನದ ಎಡ ಭಾಗದ ಮತ್ತು ರಹಮತ್ ನಗರದ ಪ್ರದೇಶಗಳು ಈ ವಾರ್ಡ್ ವ್ಯಾಪ್ತಿಗೆ ಸೇರುತ್ತದೆ. ಈ ವಾರ್ಡ್‌ನಲ್ಲಿ ಕಿರಿದಾದ ಗಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿ ಎರಡು ವರ್ಷಗಳು ಉರುಳಿವೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚಾರ ಪ್ರಯಾಸಕರವಾಗಿದೆ.

ADVERTISEMENT

ಕೆಲವೇ ದಿನಗಳ ಹಿಂದೆ ಈ ವಾರ್ಡ್ ವ್ಯಾಪ್ತಿಯ ಸ್ಮಶಾನದಲ್ಲಿ ದುರಸ್ತಿ ಕಾರ್ಯ ಮಾಡಲಾಗಿದೆ. ಛತ್ರದ ಬೀದಿಯನ್ನು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಅಭಿವೃದ್ದಿಗೊಳಿಸಲಾಗಿದೆ. ಇದನ್ನು ಹೊರತು ಪಡಿಸಿ ಗುರುತರ ಕಾರ್ಯಗಳಾಗಿಲ್ಲ ಎಂಬ ಮಾತು ನಿವಾಸಿಗಳಿಂದಲೇ ಕೇಳಿಬರುತ್ತಿದೆ. ಈ ವಾರ್ಡ್‌ನ ಕೆಲ ಮನೆಗಳಿಗೆ ಭದ್ರಾ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಅಗತ್ಯವಾದ ಪೈಪ್‌ಲೈನ್ ಅಳವಡಿಸುವ ಕಾರ್ಯವೂ ವಿಳಂಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.