ADVERTISEMENT

ಗೆಲ್ಲಬೇಕೆಂಬ ಧಾವಂತದಿಂದ ಅಶಾಂತಿ ಸೃಷ್ಟಿ: ಐಪಿಡಿಜಿ ಸತೀಶ್ ಮಾಧವನ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 5:27 IST
Last Updated 3 ಆಗಸ್ಟ್ 2025, 5:27 IST
ನರಸಿಂಹರಾಜಪುರದ ರೋಟರಿ ಕ್ಲಬ್ ನ ನೂತನ ಅಧ್ಯಕ್ಷ ಕಣಿವೆ ವಿನಯ್ ಅವರಿಗೆ ರೋಟರಿ ಜಿಲ್ಲೆ 3191ನ ಐ.ಪಿ.ಡಿ.ಜಿ ಬೆಂಗಳೂರಿನ ಸತೀಶ್ ಮಾಧವನ್ ಪದವಿ ಪ್ರಧಾನ ಮಾಡಿದರು
ನರಸಿಂಹರಾಜಪುರದ ರೋಟರಿ ಕ್ಲಬ್ ನ ನೂತನ ಅಧ್ಯಕ್ಷ ಕಣಿವೆ ವಿನಯ್ ಅವರಿಗೆ ರೋಟರಿ ಜಿಲ್ಲೆ 3191ನ ಐ.ಪಿ.ಡಿ.ಜಿ ಬೆಂಗಳೂರಿನ ಸತೀಶ್ ಮಾಧವನ್ ಪದವಿ ಪ್ರಧಾನ ಮಾಡಿದರು   

ನರಸಿಂಹರಾಜಪುರ: ಎಲ್ಲರೂ ಗೆಲ್ಲಬೇಕೆಂಬ ದಾವಂತದಿಂದ ಜಗತ್ತಿನಲ್ಲೂ ಶಾಂತಿಯಿಲ್ಲ. ಮನೆಯಲ್ಲೂ ಶಾಂತಿಯಿಲ್ಲವಾಗಿದೆ ಎಂದು ರೋಟರಿ ಜಿಲ್ಲೆ 3191ರ ಐಪಿಡಿಜಿ ಸತೀಶ್ ಮಾಧವನ್ ಹೇಳಿದರು.

ಇಲ್ಲಿನ ಸಹರಾ ಸಮುದಾಯ ಭವನದಲ್ಲಿ ಬುಧವಾರ ನಡೆದ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಮನೆ ಸ್ಥಿತಿ ಚೆನ್ನಾಗಿರಬೇಕು. ಮನಸ್ಥಿತಿ ಚೆನ್ನಾಗಿದ್ದಾಗ ಮಾತ್ರ ರೋಟರಿಯನ್ನು ಅನುಭವಿಸಬಹುದು. ಯಾರು ಸಹ ರೋಟರಿಯನ್ನು ಬಿಟ್ಟು ಹೋಗುವುದಿಲ್ಲ ಎಂದರು.

ADVERTISEMENT

ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಎಲ್ಲಾ ಕೆಲಸಗಳನ್ನು ಸರ್ಕಾರ ಮಾಡಲು ಸಾಧ್ಯವಿಲ್ಲ. ದೇಶದಿಂದ ಪೊಲೀಯೊ ನಿರ್ಮೂಲನೆ ಮಾಡುವಲ್ಲಿ ರೋಟರಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ರೋಟರಿ ಸಂಸ್ಥೆ ಮತ್ತು ಅಮ್ಮ ಫೌಂಡೇಶನ್ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ 11 ಜನರಿಗೆ ವ್ಹೀಲ್ ಚೇರ್, 7 ಜನರಿಗೆ ವಾಕಿಂಗ್ ಸ್ಟೀಕ್, 6 ಜನರಿಗೆ ವಾಕರ್, 9 ಜನರಿಗೆ ವಾಟರ್ ಬೆಡ್ ನೀಡಲಾಗುವುದು, 5 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು. 12 ತಿಂಗಳು 12 ಜನ ಸಂಪನ್ಮೂಲ ವ್ಯಕ್ತಿಗಳಳಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಬೆಂಗಳೂರಿನ ಕ್ವೀನ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಸೆಲ್ಯೂಷನ್ಸ್‌ನ ನಿರ್ದೇಶಕಿ ಮಧುರಾಣಿ ಗೌಡ ಮಾತನಾಡಿ, ಇನ್ನರ್ ವ್ಹೀಲ್‌ನಿಂದ ಮಾಡುವ ಕೆಲಸಗಳು ಹೆಚ್ಚು ಜನರಿಗೆ ತಲಪುವಂತಾಗಬೇಕು. ತೃಪ್ತಿಯಾಗುವ ಕೆಲಸ ಮಾಡಬೇಕು. ಎಷ್ಟು ಒಳ್ಳೆಯದು ಮಾಡಲು ಸಾಧ್ಯವಾಗುತ್ತದೆಯೋ ಅಷ್ಟು ಒಳ್ಳೆಯ ಕೆಲಸ ಮಾಡಬೇಕು ಎಂದರು.

ವಲಯ 6ರ ಅಸಿಸ್ಟೆಂಟ್ ಗವರ್ನರ್ ಜಿ.ರಾಜ್ ಗೋಪಾಲ್ ಜೋಷಿ ಮಾತನಾಡಿದರು. ರೋಟರಿ ಸಂಸ್ಥೆಯ ನೂತನ ಕಾರ್ಯದರ್ಶಿ ಎಸ್.ಎಸ್.ಲೋಕೇಶ್, ನಿರ್ಗಮಿತ ಅಧ್ಯಕ್ಷ ಜಿ.ಆರ್.ದಿವಾಕರ್, ಕಾರ್ಯದರ್ಶಿ ಮಧುವೆಂಕಟೇಶ್, ಇನ್ನರ್ ವ್ಹೀಲ್ ಕ್ಲಬ್ ನೂತನ ಅಧ್ಯಕ್ಷೆ ಭವ್ಯ ಸಂತೋಷ್, ಕಾರ್ಯದರ್ಶಿ ನೀತಾ ಪ್ರದೀಪ್, ನಿರ್ಗಮಿತ ಅಧ್ಯಕ್ಷೆ ಬಿಂದುವಿಜಯ್, ಕಾರ್ಯದರ್ಶಿ ರಾಧಿಕಾ ಅರ್ಜುನ್, ಸ್ವಪ್ನಾಲಿಮಹೇಶ್, ಭಾವನಾ ವಿನಯ್, ಬಿ.ಟಿ.ವಿಜಯಕುಮಾರ್, ರಮ್ಯ, ಕೃತಿಕಾ, ಎಸ್.ಎಸ್.ಶಾಂತಕುಮಾರ್ ಹಾಜರಿದ್ದರು.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ನಿವೃತ್ತ ಯೋಧ ಮನಿಷ್, ಸಮಾಜ ಸೇವಕಿ ಜುಬೇದಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಗಳಲ್ಲಿ ಪೇಪರ್ ಕಪ್ ಮತ್ತು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಬಳಸುವ ಪ್ರಮಾಣ ಕಡಿಮೆ ಮಾಡಬೇಕು. ಪೇಪರ್‌ ಕಪ್‌ನಲ್ಲಿ ಕಾಫಿ ಕುಡಿಯುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿದೆ.
ನಟರಾಜ್ ಗೋಗಟೆ ರೋಟರಿ ವಲಯ ಲೆಪ್ಟಿನೆಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.