ADVERTISEMENT

ಸಪ್ತಾಸ್ಮಿ ಕಿರುಚಿತ್ರದಲ್ಲಿ ಮಕ್ಕಳ ನಟನೆಗೆ ಶ್ಲಾಘನೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 4:00 IST
Last Updated 16 ನವೆಂಬರ್ 2022, 4:00 IST
ಸಪ್ತಾಸ್ಮಿ ಕಿರುಚಿತ್ರದಲ್ಲಿ ನಟಿಸಿದ ಪುಟಾಣಿಗಳನ್ನು ಸನ್ಮಾನಿಸಲಾಯಿತು. ಭಾಗ್ಯ ನಂಜುಂಡಸ್ವಾಮಿ, ಡಾ.ಕೆ.ಉಮೇಶ್, ಡಾ.ಸರವಣ ಕದಿರುವೇಲು ಇದ್ದರು
ಸಪ್ತಾಸ್ಮಿ ಕಿರುಚಿತ್ರದಲ್ಲಿ ನಟಿಸಿದ ಪುಟಾಣಿಗಳನ್ನು ಸನ್ಮಾನಿಸಲಾಯಿತು. ಭಾಗ್ಯ ನಂಜುಂಡಸ್ವಾಮಿ, ಡಾ.ಕೆ.ಉಮೇಶ್, ಡಾ.ಸರವಣ ಕದಿರುವೇಲು ಇದ್ದರು   

ನರಸಿಂಹರಾಜಪುರ: ಸಪ್ತಾಸ್ಮಿ ಕಿರು ಚಿತ್ರದಲ್ಲಿ ಮಕ್ಕಳು ಅದ್ಭುತವಾಗಿ ನಟನೆ ಮಾಡಿದ್ದಾರೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಕಿರು ಚಿತ್ರ ಸಪ್ತಾಸ್ಮಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಪ್ತಾಸ್ಮಿ ಕಿರು ಚಿತ್ರದ ನಿರ್ದೇಶಕ ಎಂ.ಪಿ.ಪ್ರದೀಪ್ ಮಾತನಾಡಿ, ತಾಯಿಗೆ ಉತ್ತಮ ಸ್ಥಾನ ನೀಡಲು ಮಕ್ಕಳು ತಂತ್ರಜ್ಞಾನ ಬಳಸಿಕೊಳ್ಳುವ ರೀತಿಯನ್ನು ತಿಳಿಸಿದ್ದೇನೆ. ಯೂಟ್ಯೂಬ್‌ನಲ್ಲಿ ಸಪ್ತಾಸ್ಮಿ ವೀಕ್ಷಿಸಬಹುದು’ ಎಂದರು.

ADVERTISEMENT

ಯುವರಕ್ಷ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಾ.ಸರವಣ ಕದಿರುವೇಲ್, ಪ್ರಾಂಶುಪಾಲ ಡಾ.ಕೆ.ಉಮೇಶ್ ಮಾತನಾಡಿದರು.

ಸಿಡಿಪಿಒ ಟಿ.ಆರ್.ನಿರಂಜನ
ಮೂರ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಂ.ಆರ್.ನಿರಂಜನ್, ಸುನಿತಾ ಇದ್ದರು. ಪೋಷಕರು ಅನಿಸಿಕೆ ವ್ಯಕ್ತಪಡಿಸಿದರು. ಕಿರು ಚಿತ್ರ ತಂಡವನ್ನು ಅಭಿನಂದಿಸಲಾಯಿತು. ಸಪ್ತಾಸ್ಮಿ ಕಿರುಚಿತ್ರದಲ್ಲಿ ಪುಟಾಣಿ ಕಲಾವಿದರಾದ ಮಿಷ್ಕಿ, ಅರುಷ್ ಗೌಡ, ಯಾಮಿನಿ, ಅನುಷ್, ಪ್ರಜ್ವಲ್, ಸನ್ನಿ, ಅಂಜನಾ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.