ಮೂಡಿಗೆರೆ ತಾಲ್ಲೂಕಿನ ಆಲೇಕಾನ್ ಹೊರಟ್ಟಿ ಗ್ರಾಮದಲ್ಲಿ ಸೋಮವಾರ ಉಪಗ್ರಹ ಆಧಾರಿತ ಮೊಬೈಲ್ ಗೋಪುರವನ್ನು ಸಂಸದ ಕೋಟ ಶ್ರಿನೀವಾಸ ಪೂಜಾರಿ ಉದ್ಘಾಟಿಸಿದರು
ಮೂಡಿಗೆರೆ: ಮಲೆನಾಡಿನ ಗುಡ್ಡಗಾಡು ಪ್ರದೇಶಗಳಿಗೆ ಉಪಗ್ರಹ ಆಧಾರಿತ ಮೊಬೈಲ್ ಟವರ್‌ಗಳು ಸಹಕಾರಿಯಾಗಲಿವೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಆಲೇಕಾನ್ ಹೊರಟ್ಟಿ ಗ್ರಾಮದಲ್ಲಿ ಸ್ಥಾಪಿಸಿರುವ ಉಪಗ್ರಹ ಆಧಾರಿತ ಮೊಬೈಲ್ ಟವರ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ದೇಶದ ಎಲ್ಲ ಗ್ರಾಮಗಳಿಗೂ ಮೊಬೈಲ್ ಸಂಪರ್ಕ ಇರಬೇಕು ಎಂಬುದು ಕೇಂದ್ರ ಸರ್ಕಾರದ ದೂರದೃಷ್ಟಿಯಾಗಿದೆ. ಈಗಾಗಲೇ ಆಲೇಕಾನ್ ಹೊರಟ್ಟಿ ಗ್ರಾಮದಲ್ಲಿ ಪ್ರಯೋಗಿಕವಾಗಿ ಉಪಗ್ರಹ ಆಧಾರಿತ ಮೊಬೈಲ್ ಗೋಪುರ ಸ್ಥಾಪಿಸಿ ಕಾರ್ಯರೂಪಕ್ಕೆ ತರಲಾಗಿದ್ದು, ಇದರ ಯಶಸ್ಸು ಆಧರಿಸಿ ಮುಂದಿನ ಕಾರ್ಯ ಯೋಜನೆ ಹಾಕಿಕೊಳ್ಳಲಾಗುವುದು' ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಪದಾಧಿಕಾರಿ ದೀಪಕ್ ದೊಡ್ಡಯ್ಯ, ಭರತ್ ಬಾಳೂರು, ಬಾಳೂರು ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಮಂಜುನಾಥ್, ಪರೀಕ್ಷಿತ್ ಜಾವಳಿ, ವಿನೋದ್ ಬೋಗಸೆ, ಗ್ರಾಮ ಪಂಚಾಯಿತಿ ಸದಸ್ಯ ಸಂದೀಪ್, ಕಾಳೇಗೌಡ, ಗಿರೀಶ್, ಸುರೇಶ್, ಅಭಿ ಜಾವಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.