ADVERTISEMENT

ಶೃಂಗೇರಿ ಪೀಠ:16ರಿಂದ ಸರಳ ಶಾರದಾ ಶರನ್ನವರಾತ್ರಿ

ಕೋವಿಡ್‌ ನಿಯಮ ಕಡ್ಡಾಯ ಪಾಲನೆ– 27ರಂದು ರಥೋತ್ಸವ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 6:13 IST
Last Updated 9 ಅಕ್ಟೋಬರ್ 2020, 6:13 IST
ಶೃಂಗೇರಿ ಶಾರದಾ ಪೀಠ.
ಶೃಂಗೇರಿ ಶಾರದಾ ಪೀಠ.   

ಶೃಂಗೇರಿ: ಶೃಂಗೇರಿ ಶಾರದಾ ಪೀಠದಲ್ಲಿ ಶಾರದಾ ಶರನ್ನವರಾತ್ರಿ ಇದೇ 16 ರಿಂದ 27ರ ತನಕ ನಡೆಯಲಿದೆ.

16ರಂದು ಅಧಿಕ ಅಶ್ವಯುಜ ಕೃಷ್ಣ ಅಮಾವಾಸ್ಯೆಯಂದು ಶಾರದಾಂಬಾ ಮಹಾಭಿಷೇಕ ಹಾಗೂ ಶಾರದೆಗೆ ಜಗತ್ಪ್ರಸೂತಿಕಾಲಂಕಾರ ನಡೆಯಲಿದೆ. 17ರಂದು ಶಾರದಾ ಪ್ರತಿಷ್ಠೆ
ಹಾಗೂ ಹಂಸವಾಹಿನೀ ಅಲಂಕಾರ, 18ರಂದು ಬ್ರಾಹ್ಮೀಯಾಗಿ, 19ರಂದು ಮಾಹೇಶ್ವರಿ ಯಾಗಿ, 20ರಂದು ಕೌಮಾರೀಯಾಗಿ, 21ರಂದು ಸರಸ್ವತ್ಯಾ ವಾಹನೆ, ಶತಚಂಡೀ ಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾರಂಭ ಹಾಗೂ ವೀಣಾಲಂಕಾರ, 22ರಂದು ಆಶ್ವಯುಜ ಶುಕ್ಲ ಷಷ್ಠಿಯಂದು ವೈಷ್ಣವೀಯಾಗಿ, 23ರಂದು ಮೋಹಿನಿಯಾಗಿ, 24 ರಂದು ರಾಜರಾಜೇಶ್ವರಿಯಾಗಿ, 25 ರಂದು ಮಹಾನವಮಿ, ಚಾಮುಂಡಿ ಅಲಂಕಾರ, ಶತಚಂಡೀಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, 26ರಂದು ವಿಜಯ ದಶಮಿ, ಗಜಲಕ್ಷ್ಮೀ ಅಲಂಕಾರ, ಮಠದಲ್ಲಿ ಲಕ್ಷ್ಮೀನಾರಾ ಯಣ ಹೃದಯಹೋಮ, ರಾಮ ಪಟ್ಟಾಭೀಷೇಕ ಸರ್ಗ ಪಾರಾಯಣ, ಸಂಜೆ 6ಗಂಟೆಗೆ ವಿಜಯೋತ್ಸವ, ಶಮೀಪೂಜೆ ಹಾಗೂ 27ರಂದು ಗಜಲಕ್ಷ್ಮೀ ಅಲಂಕಾರದಲ್ಲಿ ಶಾರದೆ ಕಂಗೊಳಿಸಲಿದ್ದಾಳೆ ಮತ್ತು ದೇವಸ್ಥಾನದ ಒಳಗಡೆ ಶಾರದಾಂಬಾ ರಥೋತ್ಸವ ನೆಡೆಯಲಿದೆ.

ದರ್ಬಾರು: ಶಾರದಾ ಮಠದ ಸಂಪ್ರದಾಯದಂತೆ ರತ್ನಕಿರೀಟ, ಆಭರಣಗಳನ್ನು ಮಠದ ಉಭಯ ಗುರುಗಳು ಧರಿಸಿ, ಶಾರದೆಯ ಅಭಿಮುಖವಾಗಿ ಇರಿಸಿರುವ ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗಿ ಭಕ್ತರನ್ನು ಆಶೀರ್ವಾದ ಮಾಡುವ ಮುಖಾಂತರ ದರ್ಬಾರು ನಡೆಯಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.