ADVERTISEMENT

ಉಮಾಮಹೇಶ್ವರ ಸ್ವಾಮಿ ತೆಪ್ಪೋತ್ಸವ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 3:27 IST
Last Updated 25 ನವೆಂಬರ್ 2020, 3:27 IST
ಶೃಂಗೇರಿ ಶಾರದಾ ಮಠದಲ್ಲಿ ಮಂಗಳವಾರ ಉಮಾಮಹೇಶ್ವರ ಸ್ವಾಮಿಯ ತೆಪ್ಪೋತ್ಸವ ಮತ್ತು ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿಯಿಂದ ತುಂಗಾ ನದಿಗೆ ತುಂಗಾರತಿ ನಡೆಯಿತು
ಶೃಂಗೇರಿ ಶಾರದಾ ಮಠದಲ್ಲಿ ಮಂಗಳವಾರ ಉಮಾಮಹೇಶ್ವರ ಸ್ವಾಮಿಯ ತೆಪ್ಪೋತ್ಸವ ಮತ್ತು ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿಯಿಂದ ತುಂಗಾ ನದಿಗೆ ತುಂಗಾರತಿ ನಡೆಯಿತು   

ಶೃಂಗೇರಿ: ಶೃಂಗೇರಿ ಶಾರದಾ ಮಠದಲ್ಲಿ ಮಂಗಳವಾರ ತುಂಗಾ ಪುಷ್ಕರ ಮಹೋತ್ಸವದ ಸಲುವಾಗಿ ಬೆಳಿಗ್ಗೆ 8 ಗಂಟೆಗೆ ತುಂಗಾನದಿಗೆ ಕಲ್ಪೋಕ್ತ ಪೂಜೆ ನಡೆಯಿತು. ಬಳಿಕ ತುಂಗಾಕಲಶ ಜಲವನ್ನು ಉತ್ಸವದಲ್ಲಿ ತರಲಾಯಿತು.

ಬಳಿಕ ಶಾರದಾಂಬಾ, ಶಂಕರ ಭಗವತ್ಪಾದರ ಹಾಗೂ ವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕವನ್ನು ನೆರವೇರಿಸಲಾಯಿತು.

ರಾತ್ರಿ ಮಠದ ಋತ್ವಿಜರು ತುಂಗಾ ದಡದಲ್ಲಿರುವ ತುಂಗೆ, ವರಾಹ ಮೂರ್ತಿ, ಶಾರದಾ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಉಮಾಮಹೇಶ್ವರ ಸ್ವಾಮಿಗೆ ತೆಪ್ಪೋತ್ಸವ ನಡೆಯುವ ಮೊದಲು ಮಠದ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಪೂಜೆ ಸಲ್ಲಿಸಿದರು.

ADVERTISEMENT

ಮಠದ ಋತ್ವಜರು ತುಂಗಾರತಿ ಬೆಳಗಿದರು. ತಾಲ್ಲೂಕಿನ ಭಕ್ತರು, ಪ್ರವಾಸಿಗರು ಸಂಭ್ರಮದಿಂದ ತೆಪ್ಪೋತ್ಸದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.