ಶೃಂಗೇರಿ: ‘ಶಂಕರಚಾರ್ಯರು ಸನಾತನ ಧರ್ಮ ಅವನತಿಯಲ್ಲಿದ್ದಾಗ ಅವತಾರವೆತ್ತಿ ಹಿಂದೂ ಧರ್ಮದ ಉಳಿವಿಗೆ ಕಾರಣರಾದರು’ ಎಂದು ಧಾರ್ಮಿಕ ಚಿಂತಕ ಉಳುವೆ ಗಿರೀಶ್ ಹೇಳಿದರು.
ಮೆಣಸೆ ಗ್ರಾಮ ಪಂಚಾಯಿತಿಯ ಕೆರೆಮನೆಯಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಚಾರ್ಯರ ಬಗ್ಗೆ ಅವರು ಉಪನ್ಯಾಸ ನೀಡಿದರು.
‘ಧರ್ಮಾಚರಣೆ, ಹೋಮ, ಹವನಾದಿಗಳು ಸಮಾಜದಲ್ಲಿ ನಡೆಯುತ್ತಿದ್ದು, ಇದಕ್ಕೆಲ್ಲಾ ಕಾರಣೀಭೂತರು ಶಂಕರಚಾರ್ಯರು ಎಂಬುದನ್ನು ಮರೆಯುವಂತಿಲ್ಲ. ಮಾನಸಿಕ ನೆಮ್ಮದಿ ದೊರಕಬೇಕಾದರೆ ದೇವರ ಧ್ಯಾನ, ಪೂಜೆ ಮಾಡಬೇಕು’ ಎಂದರು.
ಶಂಕರಚಾರ್ಯರ ಭಾವಚಿತ್ರಕ್ಕೆ ಮಹಾಸಭಾದ ಗುಬ್ಬಗೋಡು ವೆಂಕಟರಾವ್ ಪೂಜೆ ಸಲ್ಲಿಸಿ, ಮಂಗಳಾರತಿ ನೆರವೇರಿಸಿದರು. ಘಟಕದ ಕಾರ್ಯದರ್ಶಿ ಪ್ರವೀಣ್ ಮರಟೆ, ಶ್ರೀನಿವಾಸರಾವ್, ವಸಂತ, ಗೀತಾಭಾಸ್ಕರರಾವ್, ಜಯಲಕ್ಷ್ಮೀ, ಸುಜಾತ, ನಾಗಲಕ್ಷ್ಮಿ, ಮೀನಾಕ್ಷಿ, ಹನಕೋಡು ದಿವಾಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.