ADVERTISEMENT

ಶೃಂಗೇರಿ ಶಾರದೆಗೆ ಬ್ರಾಹ್ಮಿ ಅಲಂಕಾರ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 8:28 IST
Last Updated 9 ಅಕ್ಟೋಬರ್ 2021, 8:28 IST
ಶುಕ್ರವಾರ ಶರನ್ನವರಾತ್ರಿಯಲ್ಲಿ ಬ್ರಾಹ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದೆ (ಎಡಚಿತ್ರ). ಕೊಪ್ಪ ಮಾರ್ಕೇಟ್ ರಸ್ತೆಯ ಬಲಮುರಿ ವೀರಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ ವತಿಯಿಂದ ಪ್ರತಿಷ್ಠಾಪಿಸಲಾದ ದುರ್ಗಾದೇವಿಗೆ ಶುಕ್ರವಾರ ಮಾಹೇಶ್ವರಿ ಅಲಂಕಾರ ಮಾಡಲಾಗಿತ್ತು.
ಶುಕ್ರವಾರ ಶರನ್ನವರಾತ್ರಿಯಲ್ಲಿ ಬ್ರಾಹ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದೆ (ಎಡಚಿತ್ರ). ಕೊಪ್ಪ ಮಾರ್ಕೇಟ್ ರಸ್ತೆಯ ಬಲಮುರಿ ವೀರಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ ವತಿಯಿಂದ ಪ್ರತಿಷ್ಠಾಪಿಸಲಾದ ದುರ್ಗಾದೇವಿಗೆ ಶುಕ್ರವಾರ ಮಾಹೇಶ್ವರಿ ಅಲಂಕಾರ ಮಾಡಲಾಗಿತ್ತು.   

ಶೃಂಗೇರಿ: ಶುಕ್ರವಾರ ಶೃಂಗೇರಿ ಶಾರದೆ ಬ್ರಾಹ್ಮಿ ಅಲಂಕಾರದಲ್ಲಿ ಕಂಗೊಳಿಸಿದಳು. ಶಾರದೆ ಕೈಯಲ್ಲಿ ಕಮಂಡಲು, ಪುಸ್ತಕ, ಪಾಶ ಮತ್ತು ಚಿನ್ಮುದ್ರೆ ಧರಿಸಿ ಹಂಸ ವಾಹನಾರೂಢಳಾಗಿ ಬ್ರಹ್ಮನ ಪಟ್ಟದ ರಾಣಿಯಾದ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದಳು.

ಶಾರದಾ ಮಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಶಾರದೆಗೆ ವಿಶೇಷಪೂಜೆ ಸಲ್ಲಿಸಿದರು. ಮಠದ ಋತ್ವಿಜರಿಂದ ದೇವಿಭಾಗವತ, ದುರ್ಗಾಸಪ್ತಶತಿ, ಸೂತಸಂಹಿತೆ ಮುಂತಾದ ಪಾರಾಯಣಗಳು, ಸೂಕ್ತ ಜಪ, ದುರ್ಗಾಜಪಗಳು ನೆರವೇರಿದವು.

ಸರಳವಾಗಿ ನಡೆದ ದರ್ಬಾರು: ಗುರುವಾರ ರಾತ್ರಿ ಶಾರದೆಯ ಸನ್ನಿಧಿಯಲ್ಲಿ ಸರಳವಾಗಿ ದರ್ಬಾರು ಕಾರ್ಯಕ್ರಮ ನೆರವೇರಿತು. ಮಠದ ಅಧಿಕಾರಿಗಳು, ಪುರೋಹಿತರು ಇದ್ದರು.

ADVERTISEMENT

ದೇವಾಲಯದ ಒಳ ಪ್ರಾಂಗಣದಲ್ಲಿ ಮೂರು ಸುತ್ತು ರಥೋತ್ಸವ ನೆರವೇರಿತು. ಬಳಿಕ ಸಿಂಹಾಸನದಲ್ಲಿ ಅಸೀನರಾದ ಮಠದ ಕಿರಿಯ ಗುರುಗಳಾದ ವಿಧುಶೇಖರ ಭಾರತಿ ಸ್ವಾಮೀಜಿ ಅವರ ಸಾನ್ನಿಧ್ಯ ದಲ್ಲಿ ಶಾರದಾಂಬೆಗೆ ಮಹಾಮಂಗಳಾರತಿ ಯಾದ ಬಳಿಕ ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸರ್ವವಾದ್ಯ ಸೇವೆ ನೆರವೇರಿತು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಕುಟುಂಬ ಶಾರದಾ ಪೀಠಕ್ಕೆ ಭೇಟಿ ನೀಡುವ ಸಲುವಾಗಿ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅವಕಾಶ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.