ADVERTISEMENT

ತರೀಕೆರೆ | ಸಮವಸ್ತ್ರ ಇಲ್ಲದೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:23 IST
Last Updated 24 ಜೂನ್ 2025, 15:23 IST
ನಂದಿತಾ
ನಂದಿತಾ   

ತರೀಕೆರೆ (ಚಿಕ್ಕಮಗಳೂರು): ಸಮವಸ್ತ್ರ ಇಲ್ಲ ಎಂಬ ಕಾರಣಕ್ಕೆ ಮನನೊಂದ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಸಹ್ಯಾದ್ರಿಪುರದಲ್ಲಿ ನಡೆದಿದೆ. 

ಸಹ್ಯಾದ್ರಿಪುರ ಗ್ರಾಮದ ನಂದಿತಾ (15) ಆತ್ಮಹತ್ಯೆ ಮಾಡಿಕೊಂಡಿದ್ದು, ಲಿಂಗದಹಳ್ಳಿ ಠಾಣೆಯಲ್ಲಿ ಯುಡಿಆರ್‌ ಪ್ರಕರಣ ದಾಖಲಾಗಿದೆ.

ಎರಡು ವರ್ಷ ಶಾಲೆ ಬಿಟ್ಟಿದ್ದ ಬಾಲಕಿಯನ್ನು ಮರಳಿ ಶಾಲೆಗೆ ಕಳುಹಿಸಲು ಪೋಷಕರು ಸಮವಸ್ತ್ರ ಹೊಲಿಗೆಗೆ ಸ್ಥಳೀಯ ಟೈಲರ್‌ಗೆ ನೀಡಿದ್ದರು. ಎರಡು ದಿನದ ನಂತರ ಕೊಡುವುದಾಗಿ ಅವರು ತಿಳಿಸಿದ್ದರು. ಈ ವಿಷಯಕ್ಕೆ ಮನೆಯಲ್ಲಿ ಪೋಷಕರೊಂದಿಗೆ ಬಾಲಕಿ ಸಿಟ್ಟು ಮಾಡಿಕೊಂಡಿದ್ದಳು. ಪೋಷಕರು ಕೂಲಿ ಕೆಲಸಕ್ಕೆ ಹೋದಾಗ ವಿಷ ಸೇವಿಸಿ ಬಾಲಕಿ ಮೃತಪಟ್ಟಿದ್ದಾಳೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.