ADVERTISEMENT

ಬೀರೂರು | ಮಕ್ಕಳಿಗೆ ಮೌಢ್ಯ ನೀಗಿಸುವ ಶಿಕ್ಷಣ ಅಗತ್ಯ: ಹುಲಿಕಲ್ ನಟರಾಜ್

ವೈಜ್ಞಾನಿಕ ಸಂಶೋಧನಾ ಪರಿಷತ್ ಘಟಕಗಳ ಉದ್ಘಾಟನೆಯಲ್ಲಿ ಹುಲಿಕಲ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 5:43 IST
Last Updated 4 ಡಿಸೆಂಬರ್ 2022, 5:43 IST
ಜಿಲ್ಲಾ ಹಾಗೂ ತಾಲ್ಲೂಕು ವೈಜ್ಞಾನಿಕ ಪರಿಷತ್ ಘಟಕವನ್ನು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಉದ್ಘಾಟಿಸಿದರು. ಹುಲಿಕಲ್ ನಟರಾಜ್, ಗೌರಿಪ್ರಸನ್ನ, ಭಾಗ್ಯಮಲ್ಲೇಶ್, ವಿಜಯಕುಮಾರ್ ಇದ್ದರು
ಜಿಲ್ಲಾ ಹಾಗೂ ತಾಲ್ಲೂಕು ವೈಜ್ಞಾನಿಕ ಪರಿಷತ್ ಘಟಕವನ್ನು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಉದ್ಘಾಟಿಸಿದರು. ಹುಲಿಕಲ್ ನಟರಾಜ್, ಗೌರಿಪ್ರಸನ್ನ, ಭಾಗ್ಯಮಲ್ಲೇಶ್, ವಿಜಯಕುಮಾರ್ ಇದ್ದರು   

ಬೀರೂರು: ದೇವರು, ಧರ್ಮದ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸುವ ಪಟ್ಟಭದ್ರ ಹಿತಾಸಕ್ತಿಗಳ ಸಂಚಿನ ವಿರುದ್ಧ ಜಾಗೃತಿ ಮೂಡಿಸಲು ಎಳವೆಯಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ವಿಶ್ಲೇಷಣಾ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ನಡೆದ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಉದ್ಘಾಟನೆ ಮತ್ತು ‘ಪವಾಡಬಯಲು ವೈಜ್ಞಾನಿಕ ವಿಶ್ಲೇಷಣಾ ಕಾರ್ಯಾಗಾರ’ದಲ್ಲಿ ಪ್ರಾತ್ಯ
ಕ್ಷಿಕೆ ಪ್ರದರ್ಶಿಸಿ ಅವರು ಮಾತನಾಡಿದರು.

ಇನ್ನೊಬ್ಬರ ಮನಸ್ಸಿಗೆ ನೋವಾ ಗದಂತೆ ನಡೆದುಕೊಳ್ಳುವುದೇ ನಿಜ
ವಾದ ಧರ್ಮ, ಮಕ್ಕಳಿಗೆ ಬಾಲ್ಯ ದಿಂದಲೇ ಪ್ರಶ್ನಿಸುವ ಮನೋಭಾವ ಮತ್ತು ಘಟನೆಗಳ ಸತ್ಯಾಸತ್ಯತೆಯನ್ನು ಅರಿತು ತಮ್ಮ ಬದುಕನ್ನು ರೂಪಿಸಿ ಕೊಳ್ಳಲು ಪೂರಕ ವಾತಾವರಣ ಕಲ್ಪಿಸಿಕೊಡುವುದು ಸಮಾಜದ ಜವಾಬ್ದಾರಿಯಾಗಿದೆ.

ADVERTISEMENT

ಜನರಲ್ಲಿ ಸಂಸ್ಕೃತಿ, ಧರ್ಮ, ನಂಬಿಕೆ ಮುಖ್ಯವಾದರೂ ಪ್ರಾಕೃತಿಕ ನೈಜತೆಯನ್ನು ಮರೆಮಾಚಿ ಮೌಢ್ಯದಿಂದ ಸಮಾಜ ಹಾಗೂ ಜನರನ್ನು ದಿಕ್ಕುತಪ್ಪಿಸುವ ಕೆಲಸ ಹೆಚ್ಚಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ಶೇಖರಪ್ಪ, ಮಕ್ಕಳಿಗೆ ವೈಜ್ಞಾನಿಕ ಅರಿವನ್ನು ಮೂಡಿಸುವ ಕೆಲಸ ಇನ್ನೂ ಹೆಚ್ಚಾಗಬೇಕಿದೆ. ಇಂತಹ ಜಾಗೃತಿ ಕಾರ್ಯಾಗಾರಗಳಿಗೆ ಶಿಕ್ಷಣ ಇಲಾಖೆ ಸಹಕಾರ ನೀಡಲಿದೆ’ ಎಂದರು.

ಜಿಲ್ಲಾ ವೈಜ್ಞಾನಿಕ ಪರಿಷತ್ ಅಧ್ಯಕ್ಷೆ ಗೌರಿಪ್ರಸನ್ನ, ಜಿಲ್ಲೆಯಲ್ಲಿ ವಿಶ್ಲೇಷಣಾ ಕಾರ್ಯಾಗಾರ ಮತ್ತು ತಾಲ್ಲೂಕು ಘಟಕಗಳ ಕ್ರಿಯಾಶೀಲತೆಯಿಂದ ಉತ್ತಮ ಸಮಾಜ ನಿರ್ಮಾಣ ಕಟ್ಟುವ ಕೆಲಸವಾಗಲಿ ಎಂಬ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ಘಟಕದ ಜಿ.ಸಿ.ಜಯಸೋಮನಾಥ್, ಕಡೂರು ಘಟಕದ ಎನ್.ಸಿ.ಗುರುಮೂರ್ತಿ, ಮೂಡಿಗೆರೆ ಘಟಕದ ಕೆ.ಟಿ.ದೇವಪ್ಪ ತರೀಕೆರೆಯ ದಾದಾಪೀರ್, ಶ್ರೀಧರ್, ಕೊಪ್ಪದ ಎಚ್.ಕೆ.ಸುರೇಶ್, ಅಜ್ಜಂಪುರದ ವಿಜಯಕುಮಾರಿ, ಎನ್.ಆರ್.ಪುರದ ಅಜಯ್, ಶಿಕ್ಷಣಾಧಿಕಾರಿ ಕಚೇರಿಯ ಮೋಹನರಾಜ್, ಹಿರೇಮಠ್, ಸಹಶಿಕ್ಷಕರ ಸಂಘದ ಎಂ.ಕೆ.ವಿಜಯಕುಮಾರ್, ಮಲ್ಲಪ್ಪ, ಮಂಜುಳಾ ಮಹೇಶ್, ಭಾಗ್ಯಮಲ್ಲೇಶ್, ಸಂಪತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.