ADVERTISEMENT

ಕೊಟ್ಟಿಗೆಹಾರ: ಮಕ್ಕಳಿಂದ ಶಿಕ್ಷಕರಿಗೆ ಕ್ರೀಡಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 5:44 IST
Last Updated 6 ಸೆಪ್ಟೆಂಬರ್ 2022, 5:44 IST
ಶಿಕ್ಷಕರಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಮಕ್ಕಳು ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕಿ ರಾಧಾ ಕಾರ್ಯಪ್ಪ ಇದ್ದರು.
ಶಿಕ್ಷಕರಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಮಕ್ಕಳು ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕಿ ರಾಧಾ ಕಾರ್ಯಪ್ಪ ಇದ್ದರು.   

ಕೊಟ್ಟಿಗೆಹಾರ: ಆರೋಗ್ಯಕರ ಸಮಾಜ ನಿರ್ಮಿಸುಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಬಣಕಲ್ ರಿವರ್ ವ್ಯೂವ್ ಇಂಗ್ಲಿಷ್ ಮಾಧ್ಯಮ ಶಾಲೆಯ ನಿರ್ದೇಶಕ ಮೊಹಮ್ಮದ್ ಇಮ್ರಾನ್ ಹೇಳಿದರು.

ಬಣಕಲ್ ರಿವರ್ ವ್ಯೂವ್ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಭಾರತೀಯ ತತ್ವಶಾಸ್ತ್ರಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಸ್ಮರಣೆಯಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆ, ಶಿಕ್ಷಕರ ಮಹತ್ವವನ್ನು ಎಲ್ಲೆಡೆ ಸಾರಲು ಪ್ರೇರಣೆಯಾಗಿದೆ. ಪ್ರಜ್ಞಾವಂತ ನಾಗರಿಕರನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಕೊಡುಗೆ ಸ್ಮರಿಸಬೇಕಾಗಿದೆ ಎಂದರು.

ADVERTISEMENT

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳೇ ಶಿಕ್ಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದರು. ವಿಜೇತರಾದ ಶಿಕ್ಷಕರಿಗೆ ಮಕ್ಕಳು ಉಡುಗೊರೆಗಳನ್ನು ನೀಡಿದರು. ಮುಖ್ಯ ಶಿಕ್ಷಕಿ ರಾಧಾ ಕಾರ್ಯಪ್ಪ, ಸಹಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.