ADVERTISEMENT

ಸೀನಿಯರ್ ಚೇಂಬರ್; ಆಶಾ ಬೋಸ್ಲೆ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:08 IST
Last Updated 16 ಏಪ್ರಿಲ್ 2025, 14:08 IST
ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪ್ರಗತಿ ಲಿಜನ್ ತರೀಕೆರೆ ತಾಲ್ಲೂಕು ಘಟಕದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಹಾಗೂ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯಿತು
ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪ್ರಗತಿ ಲಿಜನ್ ತರೀಕೆರೆ ತಾಲ್ಲೂಕು ಘಟಕದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಹಾಗೂ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯಿತು   

ತರೀಕೆರೆ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪ್ರಗತಿ ಲಿಜನ್ ತರೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷೆಯಾಗಿ ಆಶಾ ಬೋಸ್ಲೆ ಆಯ್ಕೆಯಾದರು.

ಪಟ್ಟಣದ ಅರಮನೆ ಹೋಟೇಲ್ ಸಭಾಂಗಣದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪ್ರಗತಿ ಲಿಜನ್ ತರೀಕೆರೆ ತಾಲ್ಲೂಕು ಘಟಕದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಹಾಗೂ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯಿತು.

ಸಂಸ್ಥೆಯ ಪಿಪಿಎಫ್ ಅಧ್ಯಕ್ಷ ಜಯೇಶ್ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿ, ‘ತರೀಕೆರೆ ಪ್ರಗತಿ ಲಿಜನ್ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಾ ಬಂದಿದ್ದು, ಇನ್ನೂ ಮುಂದೆಯೂ ತರೀಕೆರೆಯಲ್ಲಿ ಉತ್ತಮ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ADVERTISEMENT

ನಿಕಟಪೂರ್ವ ಅಧ್ಯಕ್ಷ ಎಸ್.ಎನ್.ಆರ್.ಪಿ.ಎಫ್ ಕಲ್ಪನಾ ಸುಧಾಮ ಅವರು, ತಾವು ಒಂದೂವರೆ ವರ್ಷದ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಕಾರ್ಯಕ್ರಮಗಳ ಕುರಿತು ವರದಿ ನೀಡಿದರು. ಇವರ ಸಾಧನೆ ಪರಿಗಣಿಸಿ, ರಾಷ್ಟ್ರೀಯ ಅಧ್ಯಕ್ಷರು ಇವರನ್ನು ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆ ಮಾಡಿದರು.

ಪಿಪಿಎಫ್ ರಾಷ್ಟ್ರೀಯ ಉಪಾಧ್ಯಕ್ಷೆ ಸುರೇಖಾ ಮುರಳಿಧರ್, ಡೆವಲಪ್‍ಮೆಂಟ್ ಪ್ರೋಗ್ರಾಂ ಕೀ ನೋಟ್ ಸ್ಪೀಕರ್ ಪುಷ್ಪ ಎಸ್. ಶೆಟ್ಟಿ ಹಾಗೂ ರಾಷ್ಟ್ರೀಯ ಸಂಯೋಜಕಿ ಪಿಪಿಎಫ್ ಶಶಿಕಲಾ ಮಾತನಾಡಿದರು.

ಅಧ್ಯಕ್ಷೆಯಾಗಿ ಆಶಾ ಭೋಸ್ಲೆ, ಕಾರ್ಯದರ್ಶಿಯಾಗಿ ರಾಜೇಶ್ವರಿ ಸೀತಾರಾಮ್, ಖಜಾಂಚಿಯಾಗಿ ಯಶೋದಾ ಆಂಜನೇಯ ಅವರಿಗೆ ಪ್ರಮಾಣ ವಚನವನ್ನು ಸುರೇಖಾ ಮರಳಿಧರ್ ಬೋಧಿಸಿದರು.

ಪ್ರೋಗ್ರಾಂ ಡೈರೆಕ್ಟರ್ ಆಗಿ ಪಿಪಿಎಫ್ ಪದ್ಮ ಮೋಹನ್ ನಿರ್ವಹಿಸಿದರು. ಖಜಾಂಚಿ ವಿಶಾಲ ಮಲ್ಲಿಕಾರ್ಜುನ್ ನಿರೂಪಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ವಿಶ್ವನಾಥ್, ಮಿಲ್ಟ್ರೀ ಶ್ರೀನಿವಾಸ್, ಹೇಮಾ ಉಮೇಶ್, ಸಂಧ್ಯಾ ನಾಗೇಶ್, ಆಶಾ ಶ್ರೀನಿವಾಸ್, ಪದ್ಮ ಮೋಹನ್, ಜಯಶ್ರೀ ಕೃಷ್ಣಮೂರ್ತಿ, ರಾಜೇಶ್ವರಿ ಅಣ್ಣಯ್ಯ, ಅಕ್ಷತಾ ವೆಂಕಟೇಶ್, ಅಶ್ವಿನಿ ಸಚಿನ್, ಕಲಾ ಮಾಲ್ತೇಶ್, ಶಶಿ ಪ್ರದೀಪ್, ರಮ್ಯಾ ಸುರೇಶ, ಸಂಧ್ಯಾ ನಾಗೇಶ್, ಆಶಾ ಸಂದೇಶ್, ರತ್ನಮ್ಮ ಜಯಣ್ಣ, ತಿಮ್ಮಕ್ಕ ಗಾಳಪ್ಪ, ಮಮತ ಮಲ್ಲಿಕಾರ್ಜುನ್, ಇನ್ನರ್‌ವೀಲ್ ಅಧ್ಯಕ್ಷೆ ಉಮಾ ದಯಾನಂದ, ವೀಣಾ ಸುರೇಶ್, ಸೀತಾರಾಮ್, ಸುಧಾಮ, ವಿಠಲ್ ಭೋಸ್ಲೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.