
ತರೀಕೆರೆ: ಇತ್ತೀಚೆಗೆ ಲಕ್ಕವಳ್ಳಿಯಲ್ಲಿ ನಡೆದ ತರೀಕೆರೆ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ಪಟ್ಟಣದ ಅರುಣೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ 9 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಮೋನಿಷ ಕೆ., ಜಾನಪದ ಗೀತೆಯಲ್ಲಿ ರೋಹನ್ ಆರ್., ಭರತನಾಟ್ಯದಲ್ಲಿ ಟಿ.ಎಲ್. ಕವನ ಸಿಂದಗಿ, ಪ್ರಬಂಧ ಸ್ಪರ್ಧೆಯಲ್ಲಿ ಮೈತ್ರಿ ಡಿ. , ಚರ್ಚಾ ಸ್ಪರ್ಧೆಯಲ್ಲಿ ಪ್ರಾರ್ಥನಾ ಎಂ. , ಕವನ ವಾಚನದಲ್ಲಿ ದಿಶಾ ಟಿ.ಜಿ. ಪ್ರಥಮ ಸ್ಥಾನ ಪಡೆದಿದ್ದಾರೆ. ಕಿರಿಯ ಪ್ರಾಥಮಿಕ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಅವಾನ್ ಅಹ್ಮದ್ ಪ್ರಥಮ, ಕ್ಲೇ ಮಾಡೆಲಿಂಗ್ ನಲ್ಲಿ ಗೋಕುಲ್ ಕೆ. ಪ್ರಥಮ ಸ್ಥಾನ ಪಡೆದಿದ್ದಾರೆ.
ಕಥೆ ಹೇಳುವುದರಲ್ಲಿ ನಯನ ಡಿ. ಗೌಡ, ಇಂಗ್ಲಿಷ್ ಕಂಠಪಾಠದಲ್ಲಿ ವೈಷ್ಣವಿ ಸಿ. ದ್ವಿತೀಯ, ಚಿತ್ರಕಲೆಯಲ್ಲಿ ಯಶವಂತ್ ಕುಮಾರ್ ಟಿ.ಪಿ. ತೃತೀಯ, ಹಿರಿಯ ಪ್ರಾಥಮಿಕ ವಿಭಾಗದ ಇಂಗ್ಲಿಷ್ ಕಂಠಪಾಠದಲ್ಲಿ ಯುಕ್ತಿ ಟಿ.ಜಿ. ಪ್ರಥಮ, ಚಿತ್ರಕಲೆಯಲ್ಲಿ ತನ್ಯಾ ಟಿ.ಡಿ. ದ್ವಿತೀಯ ಹಾಗೂ ಭಕ್ತಿಗೀತೆಯಲ್ಲಿ ಕನಿಷಾ ಕೆ.ಪಿ. ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್. ಶ್ರೀ ಹರ್ಷ, ಶಾಲೆಯ ಸಂಯೋಜಕಿ ಗೀತಾ ಹರ್ಷ, ಮುಖ್ಯ ಶಿಕ್ಷಕಿ ಗೌರಮ್ಮ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.