ADVERTISEMENT

ತರೀಕೆರೆ: ಎಸ್‌ಎಸ್‌ಎಲ್‌ಸಿ ಸಾಧಕನಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:19 IST
Last Updated 10 ಮೇ 2025, 14:19 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಪಟ್ಟಣದ ಹಳಿಯೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿ ಅಕ್ಬರ್ ಭಾಷಾ ಖಾಜಾ ಹುಸೇನ್ ಕಲಾಸದ ಅವರಿಗೆ ಎಸ್‌ಡಿಆರ್  ಎಂಟರ್‌ಪ್ರೈಸಸ್ ವತಿಯಿಂದ ₹ 3ಸಾವಿರ ಮೌಲ್ಯದ ಪಠ್ಯ ಪುಸ್ತಕ, ನೋಟ್ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು

ತರೀಕೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಪಟ್ಟಣದ ಹಳಿಯೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿ ಅಕ್ಬರ್ ಭಾಷಾ ಖಾಜಾ ಹುಸೇನ್ ಕಲಾಸದ ಅವರು ಸಾಧನೆಯನ್ನು ಗೌರವಿಸಿ ಪಟ್ಟಣದ ಎಸ್.ಡಿ.ಆರ್.ಎಂಟರ್‌ಪ್ರೈಸಸ್ ವತಿಯಿಂದ ₹ 3 ಸಾವಿರ ಮೌಲ್ಯದ ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ಅವರು 625ರಲ್ಲಿ 572 ಅಂಕ ಗಳಿಸಿದ್ದಾರೆ. ಮುಂದಿನ ವರ್ಷಗಳಲ್ಲೂ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಯೋಜನೆ ಮುಂದುವರಿಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಎಚ್.ಒ.ದಯಾನಂದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT