ಕಳಸ: ತಾಲ್ಲೂಕಿನ ರಾಜ್ಯ ಹೆದ್ದಾರಿಗಳ ಮೇಲೆ ಮಳೆ ನೀರು ಹರಿದು ರಸ್ತೆಗಳಿಗೆ ಹಾನಿ ಆಗುತ್ತಿದೆ ಎಂಬ ‘ಪ್ರಜಾವಾಣಿ’ ವರದಿಗೆ ಲೋಕೋಪಯೋಗಿ ಇಲಾಖೆ ಕೂಡಲೇ ಸ್ಪಂದಿಸಿದೆ.
ಬುಧವಾರ ಈ ಬಗ್ಗೆ ಪ್ರಕಟವಾದ ವರದಿ ಗಮನಿಸಿ, ಲೋಕೋಪಯೋಗಿ ಇಲಾಖೆಯು ಕಳಸ-ಕೊಟ್ಟಿಗೆಹಾರ-ಹೊರನಾಡು ರಸ್ತೆ ಪಕ್ಕದ ಚರಂಡಿಗಳನ್ನು ಬಿಡಿಸುವ ಕೆಲಸ ಹಾಗೂ ರಸ್ತೆ ಮೇಲೆ ಹರಿಯುತ್ತಿದ್ದ ನೀರನ್ನು ಚರಂಡಿಗಳಿಗೆ ತಿರುಗಿಸುವ ಕೆಲಸ ಕೂಡ ನಡೆದಿದೆ.
ಕಳಸ-ಬಾಳೆಹೊಳೆ- ಮಾಗುಂಡಿ, ಕಳಸ- ಕುದುರೆಮುಖ ರಸ್ತೆಯಲ್ಲಿ ಕೂಡ ಇದೇ ಮಾದರಿಯಲ್ಲಿ ಕೆಲಸ ನಡೆಯಲಿದೆ. ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆಯಿಂದ ಹೊರನಾಡು ಪಂಚಾಯಿತಿವರೆಗೆ ಮರು ಡಾಂಬರೀಕರಣಕ್ಕೆ ₹2.5 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ. ಈ ರಸ್ತೆ ಅವ್ಯವಸ್ಥೆ ಬಗ್ಗೆಯೂ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.