ADVERTISEMENT

ಕಾಡಿನಲ್ಲಿ ಸಿಲುಕಿದ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:02 IST
Last Updated 27 ಸೆಪ್ಟೆಂಬರ್ 2020, 2:02 IST

ಕೊಟ್ಟಿಗೆಹಾರ: ಬಲ್ಲಾಳರಾಯನ ದುರ್ಗಕ್ಕೆ ಚಾರಣಕ್ಕೆ ಬಂದಿದ್ದ ಮೂಡಿಗೆರೆಯ ಸುಶಾಂತ್ ನಗರದ ಪ್ರವಾಸಿಗರು ಶನಿವಾರ ದಾರಿ ತಪ್ಪಿ, ಕಾಡಿನಲ್ಲಿ ಸಿಲುಕಿಕೊಂಡಿದ್ದಾರೆ.

ಶನಿವಾರ ಮಧ್ಯಾಹ್ನ ದುರ್ಗದಹಳ್ಳಿ ಸಮೀಪದ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಬಲ್ಲಾಳರಾಯನದುರ್ಗ, ರಾಣಿಝರಿಗೆ ಚಾರಣಕ್ಕೆ ಬಂದಿದ್ದ ಮೂಡಿಗೆರೆ ಮೂಲದ ಪ್ರಜ್ವಲ್, ಸ್ವರೂಪ್, ಪ್ರಜ್ವಲ್, ವಿವೇಕ್ ಎಂಬುವವರು ಬಲ್ಲಾಳರಾಯನ ದುರ್ಗದ ಅರಣ್ಯದಲ್ಲಿ ಸಾಗಿದ್ದು, ಶನಿವಾರ ಸಂಜೆಯ ವೇಳೆಗೆ ಹಿಂದಿರುಗಿ ಬರಲು ದಾರಿ ತಿಳಿಯದೆ ಅರಣ್ಯದಲ್ಲೇ ಸಿಲುಕಿದ್ದಾರೆ.

ದಾರಿತಪ್ಪಿದ ಪ್ರವಾಸಿಗರು ಅರಣ್ಯದಲ್ಲಿ ನೆಟ್‍ವರ್ಕ್ ಸಿಗುವ ಕೆಲ ಕಡೆಗಳಲ್ಲಿ ನಿಂತು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಸ್ಥಳೀಯರು ರಾತ್ರಿ ತೆರಳಿ ಹುಡುಕಾಟದಲ್ಲಿ ತೊಡಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಸಾಥ್‌ ನೀಡಿದ್ದಾರೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅರಣ್ಯಾಧಿಕಾರಿ ಯಾಸಿನ್, ‘ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಚಾರಣಕ್ಕೆ ಬಂದಿದ್ದಾರೆ. ಸಂಜೆ 4 ಗಂಟೆಯೊಳಗೆ ಚಾರಣ ಮುಗಿಸಬೇಕು. ಆದರೆ, ಕತ್ತಲಾದ ನಂತರವೂ ಬಾರದಿರುವುದರಿಂದ ಪ್ರವಾಸಿಗರಿಗೆ ದಾರಿ ತಪ್ಪಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.