ಮೂಡಿಗೆರೆ ತಾಲ್ಲೂಕಿನ ಬಿದಿರುತಳ ಗ್ರಾಮದಲ್ಲಿ ಅನುಮತಿಯಿಲ್ಲದೇ ಮೀಸಲು ಅರಣ್ಯ ಪ್ರವೇಶಿಸಿದ್ದ 103 ಮಂದಿ ಪ್ರವಾಸಿಗರನ್ನು ಬಣಕಲ್ ಹಾಗೂ ಬಾಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರು
ಮೂಡಿಗೆರೆ: ತಾಲ್ಲೂಕಿನಲ್ಲಿರುವ ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶವಾದ ಬಿದಿರುತಳದಲ್ಲಿ ಅನುಮತಿ ಇಲ್ಲದೆ ಚಾರಣಕ್ಕೆ ತೆರಳುತ್ತಿದ್ದ 103 ಮಂದಿ ಪ್ರವಾಸಿಗರನ್ನು ಶನಿವಾರ ಬೆಳಿಗ್ಗೆ ತಡೆದ ಪೊಲೀಸರು, ಅವರನ್ನು ವಾಪಸ್ ಕಳಿಸಿದರು. ಖಚಿತ ಮಾಹಿತಿಯ ಮೇಲೆ ಬಣಕಲ್ ಪಿಎಸ್‌ಐ ರೇಣುಕಾ ಹಾಗೂ ಬಾಳೂರು ಪಿಎಸ್‌ಐ ದಿಲೀಪ್ ಕುಮಾರ್ ನೇತೃತ್ವದಲ್ಲಿ ಪೊಲೀಸರು
ಸ್ಥಳಕ್ಕೆ ತೆರಳಿದರು. ಪ್ರವಾಸಿಗರೆಲ್ಲರೂ ಬೆಂಗಳೂರು ಮೂಲದ ಐ.ಟಿ ಕಂಪನಿಯ ಉದ್ಯೋಗಿಗಳು. ಸ್ಥಳೀಯ ವ್ಯಕ್ತಿ ಅವರನ್ನು ಅರಣ್ಯ ಪ್ರದೇಶಕ್ಕೆ ಕರೆದೊಯದ್ದಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.