ADVERTISEMENT

ಮೂಡಿಗೆರೆ: ಗೌಡಳ್ಳಿ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 13:45 IST
Last Updated 7 ಆಗಸ್ಟ್ 2023, 13:45 IST
ಮೂಡಿಗೆರೆ ತಾಲ್ಲೂಕಿನ ಗೌಡಳ್ಳಿ ಕೃಷಿಪತ್ತಿನ ಸಹಕಾರ ಸಂಘಕ್ಕೆ ಸೋಮವಾರ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು
ಮೂಡಿಗೆರೆ ತಾಲ್ಲೂಕಿನ ಗೌಡಳ್ಳಿ ಕೃಷಿಪತ್ತಿನ ಸಹಕಾರ ಸಂಘಕ್ಕೆ ಸೋಮವಾರ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು   

ಮೂಡಿಗೆರೆ: ಚುನಾವಣೆ ಘೋಷಣೆಯಾಗಿದ್ದ ಗೌಡಳ್ಳಿ ಕೃಷಿಪತ್ತಿನ ಸಹಕಾರ ಸಂಘಕ್ಕೆ ಹನ್ನೊಂದು ಮಂದಿ ನಿರ್ದೇಶಕರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿ.ಕೆ ದಿವಾಕರ, ಎಚ್.ಜಿ ವೆಂಕಟೇಶ್, ಕೆ.ಎಲ್ ಚಂದ್ರೇಗೌಡ, ಎಂ.ಎಸ್ ಸಂತೋಷ್, ಬಿ.ಬಿ ವೀಣೇಶ್, ಬಿ.ಪಿ ಕೃಷ್ಣೇಗೌಡ, ಎಚ್.ಕೆ ಲಿಂಗಪ್ಪ, ಎಂ.ಪಿ ಅರುಣ್, ಜಯಮ್ಮ, ಸುಮರವಿಕುಮಾರ್, ಜಿ.ಟಿ ರಮೇಶ್ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ. ಸಹಕಾರ ಸಂಘದ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಲಾಯಿತು. ಗ್ರಾಮಸ್ಥರು, ಸಂಘದ ಪದಾಧಿಕಾರಿಗಳು, ಸದಸ್ಯರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT