ಕೊಟ್ಟಿಗೆಹಾರ: ಪ್ರವಾಸಿ ತಾಣವಾದ ಕೊಟ್ಟಿಗೆಹಾರದಲ್ಲಿ ಭಾನುವಾರ ಪ್ರವಾಸಿಗರು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದ್ದರಿಂದ ಒಂದು ಗಂಟೆಗೂ ಹೆಚ್ಚು ಸಮಯ ಸಂಚಾರ ದಟ್ಟಣೆ ಉಂಟಾಗಿ ಜನರ ಪರದಾಡಿದರು.
ಪ್ರವಾಸಿಗರು ಕೊಟ್ಟಿಗೆಹಾರದ ಅಂಗಡಿ, ಹೋಟೆಲ್‌ಗಳ ಎದುರು ಗಾಡಿ ನಿಲ್ಲಿಸಿ, ಆಹಾರ ಸೇವಿಸಲು ತೆರಳಿದರು. ಇದರಿಂದ ದಟ್ಟಣೆ ಉಂಟಾಯಿತು. ಈ ನಡುವೆ ಶಿವಮೊಗ್ಗದಿಂದ ಪೊಲೀಸರ ತಂಡವೊಂದು ಖಾಸಗಿ ವಾಹನದಲ್ಲಿ ಪ್ರವಾಸ ಬಂದಿದ್ದರು. ಈ ವಾಹನವನ್ನೂ ರಸ್ತೆ ಬದಿಯಲ್ಲೇ ನಿಲ್ಲಿಸಿದ್ದರು. ಸಂಚಾರ ದಟ್ಟಣೆ ನಿಯಂತ್ರಿಸಲು ಬಣಕಲ್ ಸಬ್ ಇನ್‌ಸ್ಪೆಕ್ಟರ್ ಕೌಶಿಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ರಸ್ತೆ ಬದಿ ಎಲ್ಲಿ ಬೇಕೆಂದರಲ್ಲಿ ವಾಹನ ನಿಲ್ಲಿಸಿದ್ದ ಸವಾರರಿಗೆ ದಂಡ ಹಾಕಿದರು. ಪೊಲೀಸರು ಬಂದಿದ್ದ ವಾಹನಕ್ಕೂ ₹500ದಂಡ ಹಾಕಿದರು. ಸಂಚಾರ ನಿಯಮ ಉಲ್ಲಂಘಿಸಿದ ಪೊಲೀಸರಿಗೂ ದಂಡದ ಬಿಸಿ ತಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.