ADVERTISEMENT

ಕಾಡುಕೋಣ ದಾಳಿ; ಮಹಿಳೆಯ ಚಿಕಿತ್ಸೆಗೆ ₹1 ಲಕ್ಷ ಪರಿಹಾರ ನೀಡಿದ ಟಿ.ಡಿ.ರಾಜೇಗೌಡ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 13:52 IST
Last Updated 7 ಸೆಪ್ಟೆಂಬರ್ 2023, 13:52 IST
ಕಾಡುಕೋಣ ದಾಳಿಗೊಳಗಾದ ಸುಮಿತ್ರಾ ಅವರ ಚಿಕಿತ್ಸೆಗೆ ಕೊಪ್ಪದಲ್ಲಿ ಶಾಸಕ ಟಿ.ಡಿ.ರಾಜೇಗೌಡ ರೂ.1 ಲಕ್ಷ ಮೊತ್ತದ ಚೆಕ್ ವಿತರಿಸಿದರು. ಆರ್.ಎಫ್.ಒ ಜಿ.ಟಿ.ರಂಗನಾಥ್ ಇದ್ದರು
ಕಾಡುಕೋಣ ದಾಳಿಗೊಳಗಾದ ಸುಮಿತ್ರಾ ಅವರ ಚಿಕಿತ್ಸೆಗೆ ಕೊಪ್ಪದಲ್ಲಿ ಶಾಸಕ ಟಿ.ಡಿ.ರಾಜೇಗೌಡ ರೂ.1 ಲಕ್ಷ ಮೊತ್ತದ ಚೆಕ್ ವಿತರಿಸಿದರು. ಆರ್.ಎಫ್.ಒ ಜಿ.ಟಿ.ರಂಗನಾಥ್ ಇದ್ದರು   

ಕೊಪ್ಪ: ಕಾಡುಕೋಣ ದಾಳಿಗೆ ಸಿಲುಕಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ತಾಲ್ಲೂಕಿನ ಹೇರೂರು ಗ್ರಾಮದ ಸುಮಿತ್ರ ಅವರ ಚಿಕಿತ್ಸೆಗೆ ₹1 ಲಕ್ಷ ಪರಿಹಾರ ಮೊತ್ತದ ಚೆಕ್ ಅನ್ನು ಶಾಸಕ ಟಿ.ಡಿ.ರಾಜೇಗೌಡ ಗುರುವಾರ ವಿತರಿಸಿದರು.

ಬುಧವಾರ ಬೆಳಿಗ್ಗೆ ಹೇರೂರು ಗ್ರಾಮದ ಅಲ್ನೂರ್ ಎಸ್ಟೇಟ್ ನಲ್ಲಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡುಕೋಣ ದಾಳಿ ನಡೆಸಿದ್ದು, ತೊಡೆ ಭಾಗಕ್ಕೆ ಪೆಟ್ಟು ಬಿದ್ದಿದೆ. ತಕ್ಷಣ ಅರಣ್ಯ ಇಲಾಖೆಯಿಂದ ಮಹಿಳೆಯ ಚಿಕಿತ್ಸೆಗಾಗಿ ಕುಟುಂಬಕ್ಕೆ ಹಣ ನೀಡಿದ್ದಾರೆ.

ಚೆಕ್ ವಿತರಿಸಿ ಮಾತನಾಡಿದ ಶಾಸಕ ರಾಜೇಗೌಡ ಅವರು, ‘ಗಾಯಗೊಂಡ ಮಹಿಳೆಯ ಚಿಕಿತ್ಸೆಗೆ ಅರಣ್ಯ ಇಲಾಖೆ ಕ್ರಮ ವಹಿಸಲಿದೆ. ಕಾಡು ಪ್ರಾಣಿ ದಾಳಿಗೆ ಒಳಗಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಹೇಳಿದರು.

ADVERTISEMENT

ವಲಯ ಅರಣ್ಯಾಧಿಕಾರಿ ಜಿ.ಟಿ.ರಂಗನಾಥ್, ಜಯಪುರ ಡಿ.ಆರ್.ಎಫ್.ಒ ರಘು ಯು.ಎನ್., ಕೊಪ್ಪ ಡಿ.ಆರ್.ಎಫ್.ಒ ದಿವಾಕರ್, ಹಿರೇಗದ್ದೆ ಬೀಟ್ ಫಾರೆಸ್ಟರ್ ಕಿರಣ್, ಜಯಪುರ ಬೀಟ್ ಫಾರೆಸ್ಟರ್ ಗಿರೀಶ್, ಕಾಂಗ್ರೆಸ್ ಮುಖಂಡರಾದ ಎಚ್.ಎಂ.ಸತೀಶ್, ಅನ್ನಪೂರ್ಣ ನರೇಶ್, ನುಗ್ಗಿ ಮಂಜುನಾಥ್, ಬಿ.ಪಿ.ಚಿಂತನ್, ಎಚ್.ಕೆ.ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.