ADVERTISEMENT

ತರೀಕೆರೆ: ಕಾಡಾನೆ ದಾಳಿಗೆ ಅಡಿಕೆ ತೆಂಗು ಬೆಳೆಗಳು ನಾಶ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 13:17 IST
Last Updated 30 ನವೆಂಬರ್ 2023, 13:17 IST
ತಾಲ್ಲೂಕಿನ ಉಡೇವಾ ಗ್ರಾಮz ಸರ್ವೆ ನಂಬರ್ 32 ರಲ್ಲಿ ಅಡಿಕೆ ಬೆಳೆಯನ್ನು ಕಾಡಾನೆಗಳು ಹಾಳುಮಾಡಿರುವುದು 
ತಾಲ್ಲೂಕಿನ ಉಡೇವಾ ಗ್ರಾಮz ಸರ್ವೆ ನಂಬರ್ 32 ರಲ್ಲಿ ಅಡಿಕೆ ಬೆಳೆಯನ್ನು ಕಾಡಾನೆಗಳು ಹಾಳುಮಾಡಿರುವುದು    

ತರೀಕೆರೆ : ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಉಡೇವಾ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಸಿದ್ದನಾಯ್ಕ, ಕೃಷ್ಣನಾಯ್ಕ ಮತ್ತು ಪ್ರವೀಣ್ ಎಂಬುವರಿಗೆ ಸೇರಿದ ಅಡಿಕೆ, ತೆಂಗಿನ ತೋಟ ಹಾಗೂ ಕಾಳು ಮೆಣಸಿನ ಬೆಳೆಗೆ ಹಾನಿಯಾಗಿದೆ.

‘ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಕಾಡಾನೆಗಳನ್ನು ಕಾಡಿಗೆ ಓಡಿಸಬೇಕು ಎಂದು ಉಡೇವಾ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ನಾಯ್ಕ ಒತ್ತಾಯಿಸಿದರು.

‘ಕಾಡಾನೆ ದಾಳಿಯಿಂದ ಆಗಿರುವ ಬೆಳೆ ಹಾನಿಗೆ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು’ ಎಂದು ವಲಯ ಅರಣ್ಯ ಅಧಿಕಾರಿ ಅತೀಪ್ ಅಹಮ್ಮದ್ ತಿಳಿಸಿದರು.

ADVERTISEMENT
ತಾಲ್ಲೂಕಿನ ಉಡೇವಾ ಗ್ರಾಮz ಸರ್ವೆ ನಂಬರ್ 32 ರಲ್ಲಿ ತೆಂಗಿನ ಬೆಳೆಯನ್ನು ಕಾಡಾನೆಗಳು ಹಾಳುಮಾಡಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.