ಕೊಪ್ಪ: ಹರಂದೂರಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯೋಗ ದಿನಾಚರಣೆ ನಡೆಯಿತು.
ಎಎಲ್ಎಲ್‌ಎನ್ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಶಾಲೆ ಪ್ರಾಂಶುಪಾಲೆ ರಜನಿ ವಹಿಸಿದ್ದರು.
ಆಯುರ್ವೇದ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಪ್ರದೀಪ್, ದೈಹಿಕ ಶಿಕ್ಷಣ ಶಿಕ್ಷಕ ರವಿ ವೈ.ಎನ್., ಸಮಾಜ ವಿಜ್ಞಾನ ಶಿಕ್ಷಕ ಲಕ್ಷ್ಮಣ ಬಿ. ಮಾತನಾಡಿದರು.
ಶಿಕ್ಷಕರಾದ ಅರ್ಚನಾ, ಚಂದ್ರಕಲಾ, ಸುಂದರ ನಾಯ್ಕ, ಸುನೀತಾ, ಚೈತ್ರ, ಪೂಜಾ, ಸಿದ್ದಾರೂಢ ಭಾಗವಹಿಸಿದ್ದರು.
ಯೋಗ ತರಬೇತಿ ನೀಡಿದ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಸಂಶನಾ ಪತ್ರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.