ADVERTISEMENT

ತರೀಕೆರೆ: ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 12:52 IST
Last Updated 4 ಜೂನ್ 2023, 12:52 IST
ವರುಣ್
ವರುಣ್   

ತರೀಕೆರೆ: ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ  ನಡೆದು ಒಬ್ಬ ಕೊಲೆಯಾಗಿರುವ ಘಟನೆ ಶನಿವಾರ ನಡೆದಿದೆ.

ಚೌಡೇಶ್ವರಿ ಕಾಲೋನಿಯ ವರುಣ್ (22) ಕೊಲೆಯಾದ ಯುವಕ. ಶನಿವಾರ ಸಂಜೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಸಾಗುವಾಗ ಡಿಜೆ ಹಾಡು ಬದಲಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಜಗಳ ಬಿಡಿಸಿ ಸಮಾಧಾನ ಮಾಡಲಾಯಿತು. ನಂತರ ಅಭಿನಂದನಾ ಕಾರ್ಯಕ್ರಮ ರೇವಣ್ಣಸಿದ್ದೇಶ್ವರ ದೇವಾಲಯ ಸಭಾಂಗಣದಲ್ಲಿ ಮುಂದುವರಿಯಿತು. ದೇವಾಲಯ ಸಮೀಪ  ಮತ್ತೆ ರಾತ್ರಿ 9.30ರ ಸುಮಾರಿಗೆ ಜಗಳ ನಡೆದಿದೆ. ಜಗಳದಲ್ಲಿ ವರುಣ್  ಎಂಬುವರನ್ನು ಡ್ರ್ಯಾಗರ್‌ನಿಂದ ಇರಿಯಲಾಗಿದೆ. ಅವರನ್ನು ಶಿವಮೂಗ್ಗದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ವರುಣ್ ಜತೆಯಲ್ಲಿದ್ದ ಸಂಜಯ್ ಹಾಗೂ ಮಂಜುನಾಥ ಎಂಬುವರಿಗೂ ಗಾಯಗಳಾಗಿವೆ.

ಆರೋಪಿಗಳಾದ ವೇದಮೂರ್ತಿ, ನವೀನ್, ನಿತಿನ್, ಗೂಳಿ ಶರತ್, ಈಶ್ವರ್, ಗಗನ್, ಧನುಷ್, ಕೀರ್ತಿ ಎಂಬುವರನ್ನು  ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಎಸ್‌ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ನಾಗರಾಜ್, ಪೋಲಿಸ್ ಇನ್‌ಸ್ಪೆಕ್ಟರ್‌ ವೀರೇಂದ್ರ ತನಿಖೆ ಕೈಗೂಂಡಿದ್ದಾರೆ. ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.