ADVERTISEMENT

ಸಡಗರದ ಯುಗಾದಿ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 14:06 IST
Last Updated 7 ಏಪ್ರಿಲ್ 2019, 14:06 IST
ಚಿಕ್ಕಮಗಳೂರಿನಲ್ಲಿ ಕಾಳಿದಾಸ ನಗರದ ಪುಟಾಣಿ ಬೇವು–ಬೆಲ್ಲ ಹಂಚಿದ ಪರಿ.
ಚಿಕ್ಕಮಗಳೂರಿನಲ್ಲಿ ಕಾಳಿದಾಸ ನಗರದ ಪುಟಾಣಿ ಬೇವು–ಬೆಲ್ಲ ಹಂಚಿದ ಪರಿ.   

ಚಿಕ್ಕಮಗಳೂರು: ನಗರದ ಜನರು ಸಡಗರದಿಂದ ಶನಿವಾರ ಯುಗಾದಿ ಆಚರಿಸಿದರು.

ಮುಂಜಾನೆಯೆ ಮನೆ ಬಾಗಿಲಿಗೆ ಹಸಿರು ತೋರಣ ಕಟ್ಟಿದರು. ಮನೆ ಮಂದಿಯಲ್ಲ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಪೂಜಾ ಕೈಂಕರ್ಯದ ನಂತರ ಯುಗಾದಿ ವಿಶೇಷವಾದ ಬೇವು–ಬೆಲ್ಲ ತಿಂದು ಹೊಸ ವರ್ಷ ಸ್ವಾಗತಿಸಿದರು. ತರಹೆವಾರಿ ಖಾದ್ಯಗಳನ್ನು ತಯಾರಿಸಿ ಸವಿದು ಸಂತಸಪಟ್ಟರು.

ಹಬ್ಬದ ನಿಮಿತ್ತ ದೇಗುಲಗಳಲ್ಲಿ ವಿಶೇಷ ಅಲಂಕಾರ, ಪೂಜೆ ಜರುಗಿದವು. ದೇಗುಲಗಳು ಭಕ್ತರಿಂದ ಗಿಜಿಗುಡತ್ತಿದ್ದವು. ಮುಖ್ಯ ರಸ್ತೆಗಳಲ್ಲಿನ ಬಹುತೇಕ ಅಂಗಡಿಗಳು ಮುಚ್ಚಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪೊಲೀಸ್ ಬಿಗಿಭದ್ರತೆ ಇತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.