ADVERTISEMENT

ಅನ್ಯಾಯದ ವಿರುದ್ಧ ಹೋರಾಡಿದ ಅಂಬೇಡ್ಕರ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:41 IST
Last Updated 8 ಡಿಸೆಂಬರ್ 2012, 6:41 IST

ಚಿತ್ರದುರ್ಗ: ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಸೇರಿದಂತೆ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದ ಧೀಮಂತ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ಎಂದು  ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸೇತುರಾಂ ಅಭಿಪ್ರಾಯಪಟ್ಟರು.

ನಗರದ ಕಾಂಗ್ರೆಸ್‌ನ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ಡಾ.ಬಿ.ಆರ್. ಅಂಬೇಡ್ಕರ್ ಪುಣ್ಯತಿಥಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಸಂಸತ್ ಮಾಜಿ ಸದಸ್ಯ ಎಚ್. ಹನುಮಂತಪ್ಪ, ಮುಖಂಡರಾದ ಬಿ.ಜಿ. ಶ್ರೀನಿವಾಸ್, ಗೀತಾ ನಂದಿನಿಗೌಡ, ಷಬ್ಬೀರ್ ಅಹಮ್ಮದ್, ಕೆ.ಪಿ. ಸಂಪತ್‌ಕುಮಾರ್, ಓ. ಶಂಕರ್, ಬಿ.ಟಿ. ಜಗದೀಶ್, ಆಶ್ರಫ್ ಅಲಿ, ಯುವ ಕಾಂಗ್ರೆಸ್‌ನ ಮುಖಂಡರಾದ ಸಾದಿಕ್ ಉಲ್ಲಾ, ವಸಂತಕುಮಾರಿ, ಶಾಂತಮ್ಮ, ಮಂಜುಳಾ, ಆರತಿ ಮಹಡಿ ಶಿವಮೂರ್ತಿ, ಬಾಸೂರ್, ತಿಪ್ಪೇಸ್ವಾಮಿ, ಸಿ.ಜೆ. ನಾಸಿರುದ್ದೀನ್, ಮೀನಾಕ್ಷಿ, ಫಾತ್ಯರಾಜನ್, ಬಾಲಕೃಷ್ಣಸ್ವಾಮಿ, ಕುಮಾರಗೌಡ, ಕಬಲಾ ಹುಸ್ಸೇನ್, ಖಾಲಿದ್ ಹುಸೇನ್ ಹಾಜರಿದ್ದರು.

`ಇನ್ನೂ ಮರೀಚಿಕೆ'
ಚಳ್ಳಕೆರೆ
: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರೂಪಿಸಿಕೊಟ್ಟ ಸಾಮಾಜಿಕ ಪರಿವರ್ತನಾ ಚಳವಳಿಯ ಮುಂದುವರಿದ ಭಾಗವಾಗಿ ಭಾರತದ ರಾಜಕೀಯ ಹೆಬ್ಬಾಗಿಲು ಎಂದೇ ಹೆಸರಾದ ಉತ್ತರ ಪ್ರದೇಶದಲ್ಲಿ ದಲಿತರು ಆಳುವ ವರ್ಗವಾಗಿ ರೂಪುಗೊಂಡಿದ್ದಾರೆ ಎಂದು ಚಿಂತಕ ಪ್ರೊ.ಸಿ.ಕೆ. ಮಹೇಶ್ವರಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಮಾದಿಗ ಮಹಾಸಭಾ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ, ದಲಿತ ಸಮುದಾಯದಲ್ಲಿ ಸಂವಿಧಾನಾತ್ಮಕ ಮೀಸಲಾತಿಯಿಂದನೌಕರಿ ಪಡೆದವರು ಹಾಗೂ ರಾಜಕೀಯ ಲಾಭ ಅನುಭವಿಸುತ್ತಿರುವ ವ್ಯಕ್ತಿಗಳಿಂದ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯ ಆಗುತ್ತಿದೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಅವಿದ್ಯಾವಂತರು, ಉದ್ಯೋಗ ಇಲ್ಲದ ನಿರುದ್ಯೋಗಿಗಳು ಹೋರಾಟ ನಡೆಸುತ್ತಿದ್ದಾರೆ. ಮೀಸಲಾತಿ ದೊರೆತರೆ ಸೌಲಭ್ಯ ಅನುಭವಿಸುವುದು ನಮ್ಮ ಮಕ್ಕಳು ಎಂಬ ಅರಿವು ಇಲ್ಲದಂತೆ  ವರ್ತಿಸುವ ದಲಿತ ನೌಕರರ ಮನಸ್ಥಿತಿಗೆ ಚಿಕಿತ್ಸೆ ನೀಡಬೇಕಾಗಿದೆ ಎಂದರು.


ಪುರಸಭೆ ಸದಸ್ಯ ಎಂ.ಶಿವಮೂರ್ತಿ ಮಾತನಾಡಿ, ಸಾಮಾಜಿಕ ಬದ್ಧತೆಯಿಂದ ಕೂಡಿದ್ದ ಅಂಬೇಡ್ಕರ್ ಅವರ ಹೋರಾಟದ ಆಶಯ ಪ್ರಸ್ತುತ ಮರೆಯಾಗುತ್ತಿರುವುದು ವಿಷಾದನೀಯ. ಶೋಷಿತರಿಗೆ ಸಾಮಾಜಿಕ ನ್ಯಾಯ ಸಿಗದೇ ಇರುವುದಕ್ಕೆ ಆಳುವವರ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ವಕೀಲರಾದ ಪೆನ್ನಯ್ಯ, ಕುಮಾರ್, ನಾಯಕನಹಟ್ಟಿ ಏಕಾಂತಪ್ಪ, ಹನುಮಂತಪ್ಪ, ಆರ್. ವಿಜಯ್ ಕುಮಾರ್, ಡಿ. ವೀರಣ್ಣ, ನನ್ನಿವಾಳ ನಾಗರಾಜ, ಜಿ. ರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT