ADVERTISEMENT

ಚಳ್ಳಕೆರೆ: ರೈತರಿಗೆ ಕೃಷಿ ಪರಿಕರ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 6:10 IST
Last Updated 6 ಜೂನ್ 2011, 6:10 IST

ಚಳ್ಳಕೆರೆ: ರೈತರಿಗೆ ಮುಂಗಾರು ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ ಅಗತ್ಯ ಕೃಷಿ ಸಲಕರಣೆ ನೀಡುವ ಮೂಲಕ ರೈತರಿಗೆ ಪ್ರೋತ್ಸಾಹಿಸುತ್ತಿದೆ ಎಂದು ಪಶು ವೈದ್ಯಾಧಿಕಾರಿ ಡಾ.ಇ.ಕೆ. ಶಿವಣ್ಣ ಹೇಳಿದರು.

ಸಾಣೀಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರಿಗೆ  ವಿಶೇಷ ಮೇವು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ರಸಾಯನಿಕ ಗೊಬ್ಬರ, ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.

ಈ ಯೋಜನೆ ವ್ಯಾಪ್ತಿಗೆ ಬರುವ ಫಲಾನುಭವಿಗಳು ಅಗತ್ಯವಾಗಿ ನೀರಾವರಿ ಸೌಲಭ್ಯ ಹೊಂದಿರಬೇಕು ಹಾಗೂ ಜಾನುವಾರು ಸಾಕಾಣಿಕೆ ಮಾಡುತ್ತಿರಬೇಕು. ಇಂತಹ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆ ಅಡಿಯಲ್ಲಿ ್ಙ 3 ಸಾವಿರ ವೆಚ್ಚದಲ್ಲಿ ರಸಾಯನಿಕ ಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ನೀಡಲಾಗುವುದು ಎಂದು ವಿವರಿಸಿದರು.

ತಿಪ್ಪೇಸ್ವಾಮಿ, ಓಬಮ್ಮ, ಕರಿಯಮ್ಮ, ಡಿ.ಟಿ. ಅನ್ನಪೂರ್ಣಮ್ಮ, ಲಕ್ಷ್ಮೀದೇವಮ್ಮ, ಮಲ್ಲಮ್ಮ, ತಿಪ್ಪೇಸ್ವಾಮಿ, ಆರ್. ಶಿವಕುಮಾರ್, ತಿಪ್ಪೇರುದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.