ADVERTISEMENT

ಡಾ.ವಿಷ್ಣುವರ್ಧನ್ ಅವರ 61ನೇ ಹುಟ್ಟುಹಬ್ಬ ಕಾರ್ಯಕ್ರಮ....

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 8:50 IST
Last Updated 19 ಸೆಪ್ಟೆಂಬರ್ 2011, 8:50 IST

ಧರ್ಮಪುರ: ಕನ್ನಡ ಸಂಸ್ಕೃತಿ, ಭಾಷೆ ಹಾಗೂ ಚಲನಚಿತ್ರರಂಗಕ್ಕೆ ಡಾ.ವಿಷ್ಣುವರ್ಧನ್ ಅವರ ಕೊಡುಗೆ ಅಪಾರವಾದುದ್ದು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ ತಿಳಿಸಿದರು.

ಸಮೀಪದ ಅರಳೀಕೆರೆ ಗೊಲ್ಲರಹಟ್ಟಿಯಲ್ಲಿ ವಿಷ್ಣು ಗೆಳೆಯರ ಬಳಗ ಭಾನುವಾರ ಹಮ್ಮಿಕೊಂಡಿದ್ದ ಡಾ.ವಿಷ್ಣುವರ್ಧನ್ ಅವರ 61ನೇ ಹುಟ್ಟು ಹಬ್ಬದ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರುಮಾತನಾಡಿದರು.
ಡಾ.ವಿಷ್ಣುವರ್ಧನ್ ಅವರಹುಟ್ಟು ಹಬ್ಬ ಕೇವಲವೇದಿಕೆಗೆ ಸೀಮಿತ ಆಗಬಾರದು.

ಗೊಲ್ಲರಹಟ್ಟಿಗಳೆಂದರೆ ಹರಿಜನರಿಗೆ ಹಟ್ಟಿ ಒಳಗೆ ಪ್ರವೇಶ ನೀಡುವುದಿಲ್ಲವೆಂಬ ಕಳಂಕವಿದೆ.ಪ್ರತಿಯೊಬ್ಬರಿಗೂ ಸಮಾಜದಲ್ಲಿ ಸಮಾನತೆಯಿಂದ ಬದುಕುವ ಅವಕಾಶವಿದೆ. ಜಾತೀಯತೆಯನ್ನು ತೊಲಗಿಸುವುದರ ಮೂಲಕ ಗೊಲ್ಲರಹಟ್ಟಿಗಳಲ್ಲಿ ತುಂಬಿ ತುಳುಕುವ ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ದೂರವಿಡಿ. ದುಡಿದು ತಿನ್ನುವ ಪ್ರವೃತ್ತಿ ಬೆಳಸಿಕೊಳ್ಳಿ ಎಂದರು.

ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಎಂ. ಶಿವಣ್ಣ ಮಾತನಾಡಿ, ಹಟ್ಟಿಗಳಲ್ಲಿರುವ ಸಾಂಪ್ರದಾಯಗಳು ಸಮಾಜದಲ್ಲಿನ ಜನ ನಮ್ಮನ್ನು ನಿಕೃಷ್ಟವಾಗಿ ಕಾಣುವಂತಾಗಿದೆ. ಹೆಚ್ಚು ಹೆಚ್ಚು ವಿದ್ಯಾವಂತರಾಗುವುದರ ಮೂಲಕ ಈ ಅನಿಷ್ಟಗಳನ್ನು ತೊಲಗಿಸಿ. ಸಂಘಟನೆಯ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿ ಎಂದು ಸಲಹೆ ಮಾಡಿದರು.

ಧರ್ಮಪುರ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಿ, ಸದಸ್ಯ ಶಿವಮೂರ್ತಿ, ನಿವೃತ್ತ ಎಂಜಿನಿಯರ್ ತಿಮ್ಮಣ್ಣ ಮಾತನಾಡಿದರು.ಡಾ.ವಿಷ್ಣುವರ್ಧನ್ ಅವರಹುಟ್ಟುಹಬ್ಬದ ಪ್ರಯುಕ್ತ ವಿಷ್ಣು ಗೆಳೆಯರ ಬಳಗದವರು ಕೇಕ್ ಕತ್ತರಿಸಿ ಸಿಹಿ ಹಂಚಿದರು.

ವೇದಿಕೆಯಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ನಾಗಣ್ಣ, ಧರ್ಮಪುರ ವಿದ್ಯಾಸಂಸ್ಥೆಯ ನಿರ್ದೇಶಕ ಬಸವರಾಜ್, ಜಮೀನ್ದಾರ ರಾಜು, ಚಿಕ್ಕೇಗೌಡ, ರಾಮಚಂದ್ರ, ಬಸಣ್ಣ, ಮುದ್ದಮ್ಮ, ರತ್ನಮ್ಮ, ಗೌಡರಂಗಪ್ಪ, ದೊಡ್ಡಯ್ಯ, ಕುಚೇಲಪ್ಪ, ತಿಪ್ಪೇಸ್ವಾಮಿ, ವಿಎಸ್‌ಎಸ್‌ಎನ್ ಅಧ್ಯಕ್ಷ ನರಸಿಂಹಮೂರ್ತಿ, ಕೃಷ್ಣ ಹಾಗೂ ವಿಷ್ಣು ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿ. ಶ್ರುತಿ ಪ್ರಾರ್ಥಿಸಿದರು. ಚಿಕ್ಕೇಗೌಡ ಸ್ವಾಗತಿಸಿದರು. ಬಸವರಾಜು ವಂದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.