ADVERTISEMENT

ಬಿರುಗಾಳಿಗೆ ಬಾಳೆ ನಾಶ

ಆದಿವಾಲದ ಭೋವಿಕಾಲೊನಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 7:12 IST
Last Updated 17 ಏಪ್ರಿಲ್ 2013, 7:12 IST

ಹಿರಿಯೂರು: ತಾಲ್ಲೂಕಿನ ಆದಿವಾಲ ಭೋವಿಕಾಲೊನಿಯ ಕರಿಬಸಪ್ಪ ಎನ್ನುವವರ ಎರಡು ಎಕರೆಯಲ್ಲಿನ ಕಟಾವಿಗೆ ಬಂದಿದ್ದ ಬಾಳೆ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ನೆಲಕ್ಕೆ ಉರುಳಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಎರಡು ಎಕರೆಯಲ್ಲಿ 1200 ಬಾಳೆ ಕಂದುಗಳಿದ್ದು, 20-25 ದಿನದಲ್ಲಿ ಕಟಾವು ಮಾಡಬೇಕಿತ್ತು. ಕೊಳವೆಬಾವಿ ನೀರಿಗೆ ಹಾಕಿದ್ದ ಬಾಳೆಯ ಫಸಲು ಹುಲುಸಾಗಿ ಬಂದಿತ್ತು. ಕೇವಲ 50 ಗೊನೆಗಳನ್ನು ಕಟಾವು ಮಾಡಲಾಗಿತ್ತು. ಒಂದೊಂದು ಗೊನೆ 30 ಕೆ.ಜಿ. ತೂಗುತ್ತಿದ್ದವು.

ಈ ಭಾಗದ ರೈತರೆಲ್ಲ ತೋಟಕ್ಕೆ ಬಂದು ಬಾಳೆ ಫಸಲನ್ನು ನೋಡಿ ಮೆಚ್ಚುಗೆ ಸೂಚಿಸಿದ್ದರು. ಬಿರುಗಾಳಿಯಿಂದ ಸುಮಾರು ರೂ ಮೂರು ಲಕ್ಷಕ್ಕೂ ಹೆಚ್ಚು ನಷ್ಟಸಂಭವಿಸಿದೆ ಎಂದು ಕರಿಬಸಪ್ಪ ತಿಳಿಸಿದ್ದಾರೆ.

ನೆರವಿಗೆ ಮೊರೆ: ಐದು ಎಕರೆ ಭೂಮಿ ಹೊಂದಿರುವ ಕರಿಬಸಪ್ಪ ನೀರಿನ ಕೊರತೆಯಿಂದ ಕೇವಲ ಎರಡು ಎಕರೆಗೆ ಬಾಳೆ ಹಾಕಿದ್ದರು. ಫಸಲು ಕೈಗೆ ಬರುತ್ತಿದೆ ಎಂದು ನಿರೀಕ್ಷೆ ಮಾಡುತ್ತಿರುವಾಗ ಬಿರುಗಾಳಿ ಅಪ್ಪಳಿಸಿ ಬದುಕನ್ನು ಕಿತ್ತುಕೊಂಡಿದೆ. ಸರ್ಕಾರ ತನ್ನ ನೆರವಿಗೆ ಬರಬೇಕು ಎಂದು ಸಂತ್ರಸ್ತ ರೈತ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.