ADVERTISEMENT

ಮತದಾನಕ್ಕೆ 24 ದಾಖಲೆಗಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 8:06 IST
Last Updated 23 ಏಪ್ರಿಲ್ 2013, 8:06 IST

ಚಿತ್ರದುರ್ಗ: ವಿಧಾನಸಭೆಗೆ ಮೇ 5 ರಂದು ನಡೆಯುವ ಮತದಾನದ ವೇಳೆ ಚುನಾವಣಾ ಆಯೋಗ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಇತರೆ 23 ಭಾವಚಿತ್ರವಿರುವ ದಾಖಲೆಗಳಿಗೆ ಮತದಾನದ ವೇಳೆ ಹಾಜರುಪಡಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಚುನಾವಣಾ ಆಯೋಗದ ಗುರುತಿನ ಚೀಟಿ, ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ, ಪಾನ್‌ಕಾರ್ಡ್, ಕೇಂದ್ರ, ರಾಜ್ಯ ಮತ್ತು ಖಾಸಗಿ ಕಂಪನಿಗಳು ನೀಡಿರುವ ಗುರುತಿನ ಚೀಟಿ, ಭಾವಚಿತ್ರವಿರುವ ಬ್ಯಾಂಕ್ ಪಾಸ್‌ಬುಕ್ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (2013ರ ಮಾರ್ಚ್ 31ರೊಳಗೆ ಇರಬೇಕು) ಸಲ್ಲಿಸಬಹುದು  ಎಂದು ತಿಳಿಸಿದ್ದಾರೆ.

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ಪಡಿತರ ಚೀಟಿ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಸೇರಿದಂತೆ ಇತರ ಹಿಂದುಳಿದ ವರ್ಗಕ್ಕೆ ನೀಡಿರುವ ಭಾವಚಿತ್ರ ಹೊಂದಿರುವ ಪ್ರಮಾಣಪತ್ರ, ಪಿಂಚಣಿ ದಾಖಲೆ, ಮಾಜಿ ಸೈನಿಕರು, ವಿಧವಾ ವೇತನ, ವೃದ್ದಾಪ್ಯ ವೇತನದ ಆದೇಶದ ಪತ್ರ, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಪತ್ರ, ಸಶಸ್ತ್ರ ಪರವಾನಗಿ ಹೊಂದಿರುವ ಪತ್ರ, ಅಂಗವಿಕಲರ ಪ್ರಮಾಣಪತ್ರ, ಮಾಜಿ ಸೈನಿಕರ ಸಿಎಸ್‌ಡಿ ಕ್ಯಾಂಟಿನ್ ಕಾರ್ಡ್, ಸಂಧ್ಯಾ ಸುರಕ್ಷಾಕಾರ್ಡ್, ಉದ್ಯೋಗ ಖಾತರಿ ಕಾರ್ಡ್, ಯಶಸ್ವಿನಿಕಾರ್ಡ್, ಸ್ಥಳೀಯ ಸಂಸ್ಥೆಗಳು ನೌಕರರಿಗೆ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ಸರ್ಕಾರದಿಂದ ಹಿರಿಯ ನಾಗರಿಕರಿಗೆ ನೀಡಿರುವ ಗುರುತಿನ ಚೀಟಿ, ಆರೋಗ್ಯ ವಿಮಾ ಕಾರ್ಡ್, ಸ್ಮಾರ್ಟ್‌ಕಾರ್ಡ್, ಆಧಾರ್‌ಕಾರ್ಡ್, ಅನಿವಾಸಿ ಮತದಾರರು ಪಾಸ್‌ಪೋರ್ಟ್‌ನ ಮೂಲ ದಾಖಲೆ ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.